ಅವುಗಳ ಬಗ್ಗೆ ನೀವು ತಿಳಿದುಕೊಳ್ಳಿ.
ಕೊಲೊರೆಕ್ಟಲ್ ಕ್ಯಾನ್ಸರ್ : ಇದು ಕೊಲೊನ್ ಮತ್ತು ಗುದನಾಳದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಇದು ಜೀವಕ್ಕೆ ಮಾರಕವಾಗಬಹುದು.
ದೊಡ್ಡ ಕರುಳಿನ ಕ್ಯಾನ್ಸರ್ : ಇದು ವಯಸ್ಸಾದವರಲ್ಲಿ ಹೆಚ್ಚು ಕಂಡುಬರುವಂತಹ ಕ್ಯಾನ್ಸರ್ ಆಗಿದೆ. ಇದರಿಂದ ಮಲದಲ್ಲಿ ರಕ್ತ ಕಂಡುಬರುತ್ತದೆ. ಇದನ್ನು ಪತ್ತೆ ಹಚ್ಚಿ ಸರಿಯಾದ ಚಿಕಿತ್ಸೆ ಪಡೆಯಬೇಕು. ಯಾಕೆಂದರೆ ಈ ಕ್ಯಾನ್ಸರ್ ನಿಂದ ಹಲವರು ಜೀವ ಕಳೆದುಕೊಂಡಿದ್ದಾರೆ.
ಲಿವರ್ ಕ್ಯಾನ್ಸರ್ : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಈ ಕಾಯಿಲೆಯಿಂದ ಸಾವನಪ್ಪುತ್ತಿದ್ದಾರೆ. ಅತಿಯಾದ ಆಲ್ಕೋಹಾಲ್ ಸೇವನೆ, ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ, ಮತ್ತು ಹೈಪಟೈಟಿಸ್ ಬಿ ಮತ್ತು ಸಿ ಸೇರಿದಂತೆ ಮುಂತಾದ ಪಿತ್ತಜನಕಾಂಗದ ಕಾಯಿಲೆಗಳಿಂದ ಜನರು ಲಿವರ್ ಕ್ಯಾನ್ಸರ್ ಗೆ ಒಳಗಾಗುತ್ತಾರೆ.
ಅನ್ನನಾಳದ ಕ್ಯಾನ್ಸರ್ : ಇದು ಒಂದು ಗಂಭೀರ ಸ್ವರೂಪದ ಕ್ಯಾನ್ಸರ್ ಆಗಿದೆ. ಇದು ಕೊನೆಯ ಹಂತದಲ್ಲಿ ಹೆಚ್ಚು ಪತ್ತೆಯಾಗುತ್ತದೆ. ಮದ್ಯಪಾನ, ಧೂಮಪಾನ, ಅನ್ನನಾಳದ ಕಾಯಿಲೆಗಳಿಂದ ಜನರು ಈ ಕ್ಯಾನ್ಸರ್ ಗೆ ತುತ್ತಾಗುತ್ತಾರೆ.
ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್ : ಇದನ್ನು ಪ್ರಾರಂಭಿಕ ಹಂತದಲ್ಲಿ ಕಂಡುಹಿಡಿಯುವುದು ಕಷ್ಟಕರ. ಈ ರೋಗಕ್ಕೆ ಒಳಗಾದವರು 5 ವರ್ಷಕ್ಕೂ ಕಡಿಮೆ ವರ್ಷಗಳ ಕಾಲ ಬದುಕುಳಿಯುತ್ತಾರೆ. ಈ ಕ್ಯಾನ್ಸರ್ ಬರುವವರೆಗೂ ಅದರ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.
ಹಾಗಾಗಿ ಯಾವುದೇ ಗ್ಯಾಸ್, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅದನ್ನು ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ. ಇದರಿಂದ ಕ್ಯಾನ್ಸರ್ ಗೆ ಚಿಕಿತ್ಸೆಯಾದರೂ ಪಡೆಯಬಹುದು.