ಕಾಸರಗೋಡು : ಜಿಲ್ಲೆಯ ಹೈಯರ್ ಸೆಕೆಂಡರಿ ಶಾಲೆಗಳಿಗೆ ಅಗತ್ಯ ಪೀಠೋಪಕರಣಗಳನ್ನು ಒದಗಿಸಲು ಜಿಲ್ಲಾ ಪಂಚಾಯತ್ ಆಡಳಿತ ಸಮಿತಿ ಸಭೆ ನಿರ್ಧರಿಸಿತು. ಜೂ.7ರಿಂದ 9ರವರೆಗೆ ಪಿಲಿಕೋಡಿನಲ್ಲಿ ನಡೆದ 'ಅರಂಗ್' ಕುಟುಂಬಶ್ರೀ ರಾಜ್ಯ ಕಲಾ ಉತ್ಸವಕ್ಕೆ ಎರಡು ಲಕ್ಷ ರೂ. ನೀಡಲು ಹಾಗೂ ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ಸಿ-ಆಂ ಯಂತ್ರವನ್ನು ಖರೀದಿಸಲು ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಾನವಾಸ್ ಪಾದೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ಶಕುಂತಲಾ, ಎಂ. ಮನು, ಸದಸ್ಯರಾದ ಜೋಮೋನ್ ಜೋಸ್, ಜಾಸ್ಮಿನ್ ಕಬೀರ್ ಚೆರ್ಕಳ, ಜಮೀಲಾ ಸಿದ್ದೀಕ್ ದಂಡಗೋಳಿ, ಶೆಫೀಕ್ ರಝಾಕ್, ಗೋಲ್ಡನ್ ಅಬ್ದುಲ್ ರಹಮಾನ್, ನಾರಾಯಣ ನಾಯ್ಕ್, ಶೈಲಜಾ ಭಟ್, ಫಾತಿಮಾ ಶಮ್ನಾ ಬಿ.ಎಚ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶಮೀನಾ ಟೀಚರ್, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ಕೆ.ಸಜೀವ್ ಉಪಸ್ಥಿತರಿದ್ದರು.