ಕಾಸರಗೋಡು: ಶಿಕ್ಷಕ ವಲಯಕ್ಕೆ ಸರ್ಕಾರ ನೀಡುವ ಕಿರುಕುಳ ಕೊನೆಗೊಳಿಸುವುದರ ಜತೆಗೆ ಸರ್ಕಾರ ತನ್ನ ತುಘ್ಲಕ್ ಧೋರಣೆಯಿಂದ ಹಿಂದೆ ಸರಿಯಬೇಕು ಎಂದು ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ. ಅವರು ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್(ಕೆಪಿಎಸ್‍ಟಿಎ)ವತಿಯಿಂದ ಕಾಸರಗೋಡು ಜಿಲ್ಲಾ ಶಿಕ್ಷಣಾದಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ದರಣಿ ಉದ್ಘಾಟಿಸಿ ಮಾತನಾಡಿದರು.
ಸಂಯುಕ್ತ ಶಿಕ್ಷಕರ ಸಮಿತಿಯ ನೇತೃತ್ವದಲ್ಲಿ ನಡೆದ ಕ್ಲಸ್ಟರ್ ಬಹಿಷ್ಕಾರ ಮುಷ್ಕರ ಹಾಗೂ ಶಿಕ್ಷಣಾಧಿಕಾರಿ ಕಚೇರಿ ಎದುರು ನಡೆದ ಧರಣಿಗಳಲ್ಲಿ ಕೆಪಿಎಸ್‍ಟಿಎ ನಡೆಸಿರುವ ಪ್ರತಿಭಟನೆ ಮೂಲಕ ಒಗ್ಗಟ್ಟಿನ ಹೋರಾಟವನ್ನು ಸಾರ್ವಜನಿಕರು ವೀಕ್ಷಿಸುತ್ತಿದ್ದಾರೆ ಎಂಬುದನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳುವುದು ಒಳಿತು ಎಂದು ಹೇಳಿದರು. ಜಿಲ್ಲಾಧ್ಯಕ್ಷ ಕೆ.ವಿ. ವಾಸುದೇವನ್ ನಂಬೂದಿರಿ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಸಮಿತಿ ಕಾರ್ಯದರ್ಶಿ ಜಿ.ಕೆ. ಗಿರೀಶ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ. ಶಶಿಧರನ್, ಕೆ. ಅನಿಲ್ ಕುಮಾರ್, ಪ್ರಶಾಂತ್ ಕಾನತ್ತೂರು, ಅಶೋಕನ್ ಕೋಡೋತ್, ಯೂಸುಫ್ ಕೊಟ್ಯಾಡಿ, ಸ್ವಪ್ನಾ ಜಾರ್ಜ್ ಮೊದಲಾದವರು ಉಪಸ್ಥೀತರಿದ್ದರ. ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಸಿ.ಕೆ. ಅಜಿತಾ, ಟಿ.ರಾಜೇಶಕುಮಾರ್ ಕೆ.ವಿ. ಜನಾರ್ದನನ್, ಎ. ಜಯದೇವನ್, ಸಿ.ಎಂ. ವರ್ಗೀಸ್, ಎಂ.ಕೆ. ಪ್ರಿಯಾ, ಪಿ. ಜಲಜಾಕ್ಷಿ, ರಾಜ್ಯ ಉಪ ಸಮಿತಿ ಪದಾಧಿಕಾರಿಗಳಾದ ಟಿ.
ರಾಜೇಶ್ ಕುಮಾರ್, ಸಿ.ಎಂ. ವರ್ಗೀಸ್, ಪಿ. ಚಂದ್ರಮತಿ, ಪಿ.ಕೆ. ಬಿಜು, ಪಿ. ಜಲಜಾಕ್ಷಿ, ಕೆ.ಗೋಪಾಲಕೃಷ್ಣನ್, ಕೆ.ಸಂಧ್ಯಾ, ಪಿ. ಶ್ರೀಜಾ, ಕೆ.ಸುಗತನ್, ವಿಮಲ್ ಆದಿಯೋಡಿ, ನಿಕೇಶ್ ಮಾತಾಯಿ ಮತ್ತಿತರರು ಮೆರವಣಿಗೆಯ ನೇತೃತ್ವ ವಹಿಸಿದ್ದರು. ಸಂಘಟನೆ ಕಂದಾಯ ಜಿಲ್ಲಾ ಕಾರ್ಯದರ್ಶಿ ಪಿ.ಟಿ. ಬೆನ್ನಿ ಸ್ವಾಗತಿಸಿದರು.