HEALTH TIPS

ಅಮೃತಪಾಲ್ ಸಿಂಗ್ ಜೈಲು ಅವಧಿ ವಿಸ್ತರಣೆ

         ಚಂಡೀಗಢ: ಅಸ್ಸಾಂನ ಡಿಬ್ರೂಗಢದಲ್ಲಿ ಜೈಲುವಾಸ ಅನುಭವಿಸುತ್ತಿರುವ ಸಿಖ್ ಪ್ರತ್ಯೇಕತಾವಾದಿ ನಾಯಕ ಹಾಗೂ ಖದೂರ್ ಸಾಹಿಬ್ ಕ್ಷೇತ್ರದ ಸಂಸದ ಅಮೃತ್‌ಪಾಲ್ ಸಿಂಗ್ ಅವರ ಜೈಲು ವಾಸದ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ.

           ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೂ ಒಂದು ದಿನ ಮುಂಚೆ- ಜೂನ್ 3ರಂದು - ಪಂಜಾಬ್ ಸರ್ಕಾರದ ಗೃಹ ವ್ಯವಹಾರ ಮತ್ತು ನ್ಯಾಯ ಇಲಾಖೆಯು ಅಮೃತ್ ಪಾಲ್ ಸಿಂಗ್ ಅವರ ಜೈಲು ವಾಸದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.

                  ಈ ಕುರಿತ ವಿವರಗಳು ಮಾಧ್ಯಮಗಳಿಗೆ ಬುಧವಾರ ಲಭ್ಯವಾಗಿವೆ.

           'ವಾರಿಸ್ ಪಂಜಾಬ್ ದೇ' ಸಂಘಟನೆಯ ಮುಖ್ಯಸ್ಥರಾದ ಸಿಂಗ್ ಮತ್ತು ಅವರ 9 ಸಹಚರರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಅಸ್ಸಾಂನ ಜೈಲಿನಲ್ಲಿಡಲಾಗಿದೆ. ಅವರು ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries