HEALTH TIPS

ಡೆಂಗ್ಯೂ ಹೆಚ್ಚಳ, ಇರಲಿ ಎಚ್ಚರ! ಸೋಂಕು ಹರಡೋ ಸೊಳ್ಳೆಯನ್ನು ನಾಶ ಮಾಡೋದು ಹೇಗೆ?

 ಮಾನ್ಸೂನ್ ಋತುವನ್ನು (Monsoon season) ಪ್ಲೂ ಸೀಸನ್ (plu season) ಎಂದೂ ಕರೆಯುತ್ತಾರೆ. ಈ ಕಾಲದಲ್ಲಿ ರೋಗವನ್ನು ಹರಡುವ ಸೂಕ್ಷ್ಮಾಣುಜೀವಿಗಳು ತಮ್ಮ ಸಂತಾನೋತ್ಪತ್ತಿಯನ್ನು ವೇಗವಾಗಿ ನಡೆಸುತ್ತವೆ. ತೇವಾಂಶ (Moisture), ಕೆಸರು, ನಿಂತ ನೀರು ಇವೆಲ್ಲ ಸೂಕ್ಷ್ಮಾಣು ಜೀವಿಗಳ ಉತ್ಪತ್ತಿಗೆ ಪೂರಕವಾಗೋದರಿಂದ ರೋಗಗಳ ಹರಡುವಿಕೆ ವೇಗವಾಗಿ ನಡೆಯುತ್ತದೆ.

ಇಂತಹುದೇ ಮಾನ್ಸೂನ್ ಕಾಯಿಲೆಯಾಗಿರೋ ಡೆಂಗ್ಯೂ (dengue) ಪ್ರಕರಣಗಳು ಹೆಚ್ಚುತ್ತಿವೆ. ಸ್ವಲ್ಪ ನಿರ್ಲಕ್ಷಿಸಿದರೂ ಜೀವಕ್ಕೆ ಮಾರಕವಾಗುವ ಡೆಂಗ್ಯೂ ಬರದಂತೆ ನೋಡಿಕೊಳ್ಳುವುದು ಅತೀ ಮುಖ್ಯ. ಹಾಗಾದ್ರೆ ಡೆಂಗ್ಯೂ ಲಕ್ಷಣಗಳೇನು (symptoms), ನಿಯಂತ್ರಣ ವಿಧಾನ ಹಾಗೂ ಮುನ್ನೆಚ್ಚರಿಕೆ ಕ್ರಮಗಳೇನು? ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ...

ಡೇಂಜರ್ ಡೆಂಗ್ಯೂ

ಅಧ್ಯಯನಗಳ ಪ್ರಕಾರ ವಿಶ್ವದಲ್ಲಿ ಪ್ರತಿವರ್ಷ 400 ಮಿಲಿಯನ್ ಜನರು ಡೆಂಗ್ಯೂ ಸೋಂಕಿಗೆ ತುತ್ತಾಗುತ್ತಾರೆ. ಇದರಲ್ಲಿ 80 ಮಿಲಿಯನ್ ನಷ್ಟು ಜನರು ಡೆಂಗ್ಯೂ ಲಕ್ಷಣಗಳನ್ನು ತೋರಿದರೇ ಹಲವು ಪ್ರಕರಣದಲ್ಲಿ ಡೆಂಘಿ ಲಕ್ಷಣವನ್ನೇ ತೋರದೇ ಮನುಷ್ಯನನ್ನು ಹೈರಾಣಾಗಿಸುತ್ತದೆ.

ಸೊಳ್ಳೆಯಿಂದ ಹರಡುವ ಸೋಂಕು

ಒಂದು ಸಣ್ಣ ಸೊಳ್ಳೆಯು ವೈರಸ್ ನ್ನು ನಮ್ಮ ರಕ್ತಕ್ಕೆ ಸೇರಿಸುವ ಮೂಲಕ ಡೆಂಘಿ ಉತ್ಪಾದನೆಗೆ ಮೂಲವಾಗುತ್ತದೆ. ತೀವ್ರವಾದ ಡೆಂಗ್ಯೂ ಅಥವಾ ಡೆಂಗ್ಯೂ ಹೆಮರಾಜಿಕ್ ಜ್ವರದಲ್ಲಿ, ವೈರಸ್ ಪ್ಲೇಟ್‌ಲೆಟ್‌ಗಳನ್ನು (ಹೆಪ್ಪುಗಟ್ಟುವಿಕೆಯನ್ನು ರೂಪಿಸುವ ಮತ್ತು ರಕ್ತನಾಳಗಳಿಗೆ ರಚನೆಯನ್ನು ನೀಡುವ ಜೀವಕೋಶಗಳು) ಸೋಂಕು ತರುತ್ತದೆ. ಇದರ ಪರಿಣಾಮವಾಗಿ ಆಂತರಿಕ ರಕ್ತಸ್ರಾವವಾಗುತ್ತದೆ. ರಕ್ತದ ಆಂತರಿಕ ಸೋರಿಕೆಯನ್ನು ನಿಲ್ಲಿಸಲು ಸಾಕಷ್ಟು ಪ್ಲೇಟ್‌ಲೆಟ್‌ಗಳು ಇಲ್ಲದಿರುವುದರಿಂದ, ಇದುಕೋಮಾ ಸ್ಥಿತಿ, ಅಂಗ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದು.

ಡೆಂಗ್ಯೂ ಲಕ್ಷಣಗಳೇನು?

  • ಅಧಿಕ ಜ್ವರ (104 ಎಫ್)
  • ತಲೆನೋವು
  • ಸ್ನಾಯು, ಮೂಳೆ ಅಥವಾ ಕೀಲು ನೋವು
  • ವಾಂತಿ
  • ಕಣ್ಣುಗಳ ಹಿಂದೆ ನೋವು
  • ಊದಿಕೊಂಡ ಗ್ರಂಥಿಗಳು
  • ವಾಕರಿಕೆ
  • ರ್ಯಾಶ್ ಅಥವಾ ಚರ್ಮದ ಅಲರ್ಜಿ

ಇವುಗಳು ಪ್ರಮುಖ ಡೆಂಗ್ಯೂ ಲಕ್ಷಣವಾಗಿದ್ದು, ಕೆಲವರಲ್ಲಿ ಈ ಲಕ್ಷಣಗಳು ಗೋಚರಿಸದೇ ಕೂಡ ಡೆಂಗ್ಯೂ ಕಾಣಿಸಿಕೊಳ್ಳಬಹುದು.

ಡೆಂಗ್ಯೂಗೆ ಚಿಕಿತ್ಸೆ ಏನು?

ಡೆಂಗ್ಯೂ ಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಆದರೆ ಡೆಂಗ್ಯೂ ಲಕ್ಷಣವಿರುವ ರೋಗಿಯ ಇತರ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಹಾಗೂ ದೇಹದ ಪ್ಲೇಟ್ ಲೇಟ್ಸ್ ಸಂಖ್ಯೆ ಹೆಚ್ಚಿಸುವ ಮೂಲಕ ದೇಹದ ರೋಗನಿರೋಧಕ ಶಕ್ತಿ ಅಭಿವೃದ್ಧಿಪಡಿಸಲು ಸಾಧ್ಯವಿದೆ.

ಡೆಂಗ್ಯೂ ಬರೋ ಮುನ್ನ ಎಚ್ಚೆತ್ತುಕೊಳ್ಳಿ

ಡೆಂಗ್ಯೂ ಜ್ವರದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದರ ಜೊತೆಗೆ ಡೆಂಗ್ಯೂ ಬರದಂತೆ ತಡೆಯೋದು ಮುಖ್ಯವಾಗಿದೆ. ಹಾಗಿದ್ದರೇ ಡೆಂಗ್ಯೂ ಬಾರದಂತೆ ವಹಿಸಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ಇಲ್ಲಿದೆ.

ಡೆಂಗ್ಯೂಗೆ ಲಸಿಕೆ ಏನಿದೆ?

FDA 2019 ರಲ್ಲಿ ಡೆಂಗ್ವಾಕ್ಸಿಯಾ ಎಂಬ ಹೊಸ ಡೆಂಗ್ಯೂ ಲಸಿಕೆಯನ್ನು ಅನುಮೋದಿಸಿದೆ. ಡೆಂಗ್ಯೂ ಜ್ವರದಿಂದ ಪೀಡಿತರಾದ 9ರಿಂದ 45ರ ನಡುವಿನ ವಯಸ್ಸಿನ ಜನರಿಗೆ ಇದನ್ನು ನೀಡಬಹುದಾಗಿದ. ಈ ಲಸಿಕೆಯನ್ನು 3 ತಿಂಗಳ ಅವಧಿಯಲ್ಲಿ 12 ಡೋಸ್‌ಗಳಲ್ಲಿ ನೀಡಲಾಗುತ್ತದೆ. ಆದರೆ ಇದಕ್ಕಾಗಿ ನೀವು ವೈದ್ಯರ ಅನುಮತಿ ಪಡೆಯುವುದು ಕಡ್ಡಾಯ.

ಸೊಳ್ಳೆ ಕಡಿತವನ್ನು ತಪ್ಪಿಸುವುದು ಅತೀ ಅಗತ್ಯ

ಡೆಂಗ್ಯೂ ಕಾಟ ತಪ್ಪಿಸಲು ಸೊಳ್ಳೆಗಳು ಕಚ್ಚದಂತೆ ಜಾಗೃತರಾಗಿರಿ. ಸೊಳ್ಳೆಗಳ ಕಾಟವನ್ನು ತಪ್ಪಿಸುವುದರಿಂದ ಡೆಂಗ್ಯೂ ಜ್ವರ ಮಾತ್ರವಲ್ಲದೆ ಮಲೇರಿಯಾ ಮತ್ತು ಚಿಕೂನ್‌ ಗುನ್ಯಾದಂತಹ ಇತೇ ಕಾಯಿಲೆಗಳಿಂದ ರಕ್ಷಿಸಬಹುದು. ಆದ್ದರಿಂದ, ಸೊಳ್ಳೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

ನಿಮ್ಮ ಮನೆ ಹಾಗೂ ಸುತ್ತಮುತ್ತಲ ಹೀಗಿರಬೇಕು

  • ಮನೆಯ ಸುತ್ತಮುತ್ತ ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು
  • ಸೊಳ್ಳೆ ಉತ್ಪತ್ತಿಯಾಗದಂತೆ ಸ್ವಚ್ಛತೆ ಕಾಪಾಡುವುದು.
  • ನಿಯಮಿತವಾಗಿ ಡಿಡಿಟಿ ಸಿಂಪಡಿಸುವ ಮೂಲಕ ಸಂತಾನೋತ್ಪತ್ತಿ ಸ್ಥಳಗಳಲ್ಲಿ ಸೊಳ್ಳೆ ಲಾರ್ವಾಗಳನ್ನು ಕೊಲ್ಲುವುದು.
  • ಸೊಳ್ಳೆ ನಿವಾರಕಗಳನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ ಬಳಸುವುದು
  • ಮಲಗುವಾಗ ಹಗಲಿನಲ್ಲಿ ಸೊಳ್ಳೆ ಪರದೆಗಳನ್ನು ಬಳಸುವುದು.
  • ಸೊಳ್ಳೆ ಕಚ್ಚದಂತೆ ಅಗತ್ಯ ದ್ರಾವಣಗಳನ್ನು ಹಚ್ಚಿಕೊಳ್ಳುವುದು.
  • ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಸೊಳ್ಳೆ ಬಾರದಂತೆ ಮುಚ್ಚಿಡುವುದು.
  • ಹೊರಗೆ ಹೋಗುವಾಗ ಸಂಪೂರ್ಣವಾಗಿ ಮುಚ್ಚಿದ ಬಟ್ಟೆಗಳನ್ನು ಧರಿಸುವುದು.
  • ಮಕ್ಕಳನ್ನು ನೀರುನಿಂತ ಅಥವಾ ಗಿಡಮರಗಳು ಬೆಳೆದ ಪ್ರದೇಶಗಳಲ್ಲಿ ಆಡಲು ಬಿಡದಿರುವುದು
  • ಸೊಳ್ಳೆ ಕಚ್ಚದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು.

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries