ನವದೆಹಲಿ: 'ವಿನಯ ಮತ್ತು ವಿನಮ್ರತೆಯನ್ನು ಮೈಗೂಡಿಸಿಕೊಳ್ಳಿ, ನಿಷ್ಠೆ ಮತ್ತು ಪಾರದರ್ಶಕತೆಯಲ್ಲಿ ಎಂದಿಗೂ ರಾಜಿ ಆಗಬೇಡಿ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರನೇ ಅವಧಿಯ ಸರ್ಕಾರದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಸಲಿದ್ದ ನಾಯಕರಿಗೆ ಭಾನುವಾರ ಕಿವಿಮಾತು ಹೇಳಿದರು.

ಪ್ರಮಾಣ ವಚನಕ್ಕೆ ಮುನ್ನ ತಮ್ಮ ನಿವಾಸದಲ್ಲಿ ನಿಯೋಜಿತ ಸಚಿವರನ್ನು ಭೇಟಿ ಮಾಡಿದ ಅವರು, 'ಜನರು ಭಾರಿ ನಿರೀಕ್ಷೆಗಳನ್ನು ಹೊಂದಿದ್ದಾರೆ. ಅವುಗಳನ್ನು ಪ್ರತಿಯೊಬ್ಬರೂ ಪೂರೈಸಬೇಕು' ಎಂದು ಕರೆ ನೀಡಿದರು.
'ನಿಮಗೆ ನಿಯೋಜಿಸುವ ಯಾವುದೇ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ. ವಿನಮ್ರತೆ ಮತ್ತು ವಿನಯವಂತರವನ್ನು ಜನರು ಇಷ್ಟಪಡುತ್ತಾರೆ ಎಂಬುದು ನೆನಪಿರಲಿ' ಎಂದರು.
ಸಚಿವರಾಗುವವರು ಎಲ್ಲ ಪಕ್ಷಗಳ ಸಂಸದರನ್ನು ಗೌರವದಿಂದ ಕಾಣಬೇಕು. ಅವರೆಲ್ಲರೂ ಚುನಾಯಿತ ಜನಪ್ರತಿನಿಧಿಗಳು, ಅವರನ್ನು ಘನತೆಯಿಂದ ನೋಡಬೇಕು. ಸರ್ಕಾರಿ ನೌಕರರು ಮತ್ತು ಅಧಿಕಾರಿಗಳನ್ನೂ ಗೌರವದಿಂದ ನೋಡಬೇಕು ಮತ್ತು ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ತಂಡವಾಗಿ ಕೆಲಸಗಳನ್ನು ನಿರ್ವಹಿಸಬೇಕು ಎಂದು ಅವರು ತಿಳಿ ಹೇಳಿದರು.