HEALTH TIPS

ಸಂಯುಕ್ತ ರಾಷ್ಟ್ರಗಳ ಮುಖ್ಯ ಕಚೇರಿ ಜಿನಿವಾದಲ್ಲಿ ಯೋಗದಿನ: ಶ್ರೀ ಶ್ರೀ ರವಿಶಂಕರ್ ಗುರೂಜಿ ನೇತೃತ್ವ

              ಜಿನಿವಾ:ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಸಂಯುಕ್ತ ರಾಷ್ಟ್ರಗಳ ಮುಖ್ಯ ಕಚೇರಿ ಜಿನಿವಾದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಎರಡು ದಿನ (ಜೂ. 20 -21) ಯೋಗ ಕಾರ್ಯಕ್ರಮ ನಡೆಸಿಟ್ಟರು.

          ಈ ಸಂಬಂಧ ಆರ್ಟ್ ಆಫ್ ಲಿವಿಂಗ್ ಕೇಂದ್ರ ಆಯುಷ್ ಮಂತ್ರಾಲಯದ ಸಹಯೋಗದಲ್ಲಿ ಭಾರತದ ಚೀನಾ - ಭೂತಾನ್ ಗಡಿಯಿಂದ ಗುಜರಾತ್‌ನ ವಿಮಾನ ನಿಲ್ದಾಣದವರೆಗೆ, ದೆಹಲಿಯ ನೆಹರು ಪಾರ್ಕ್‌ನಿಂದ ಚೆನ್ನೈನ ಮರೀನಾ ಬೀಚ್‌ವರೆಗೆ ಹೀಗೆ ಭಾರತದ ಉದ್ದಗಲಕ್ಕೂ ಸಂಸ್ಥೆಯ ನುರಿತ ಯೋಗ ಶಿಕ್ಷಕರು ಶುಕ್ರವಾರ ಬೆಳಗ್ಗೆ ಯೋಗ ಪ್ರದರ್ಶನ ನೀಡಿದರು.

           ಈ ವೇಳೆ ಮಾತನಾಡಿದ ಶ್ರೀ ಶ್ರೀ ರವಿಶಂಕರ್ ಗುರೂಜಿ, ಆಂತರ್ಯದ ಪ್ರಾಚೀನ ಕಲೆಯಾದ ಯೋಗವು ಜಗತ್ತಿಗೆ ದೊರೆತ ವರವಾಗಿದೆ. ಸಹನಾಶಕ್ತಿ ಹೆಚ್ಚಿಸಿ ಮನಸ್ಸನ್ನು ಸಂತೋಷಪಡಿಸಿ ಬುದ್ಧಿಯನ್ನು ತೀಕ್ಷ್ಣವಾಗಿಸುತ್ತದೆ. ಯೋಗವನ್ನು ಪ್ರಾಣಾಯಾಮ, ಧ್ಯಾನದೊಡನೆ ಮಾಡಬೇಕು. ಇವುಗಳಿಲ್ಲದೆ ಕೇವಲ ಯೋಗಾಸನಗಳನ್ನು ಮಾಡಿದರೆ ಅದು ಕೇವಲ ವ್ಯಾಯಾಮವಾಗುತ್ತದೆ ಎಂದರು.

              ಯೋಗ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಕಾರ್ಪೊರೇಟ್ ಕಚೇರಿಗಳಲ್ಲಿ, ಕಾರಾಗೃಹಗಳ ಕೈದಿಗಳು, ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು, ಶಾಲಾ-ಕಾಲೇಜು, ಪರಿಸರ ಹಾಗೂ ಅರಣ್ಯ ಇಲಾಖೆ, ಭಾರತೀಯ ಸೇನೆ, ನೌಕೆ, ವಿಮಾನ ಪಡೆಗಳು, ಪ್ಯಾರಾಮಿಲಿಟರಿ ಪಡೆಗಳು, ಪೊಲೀಸ್, ಹೋಮ್ ಗಾರ್ಡ್, ಭಾರತೀಯ ಕೋಸ್ಟಲ್ ಗಾರ್ಡ್, ಆರ್ಥಿಕ ಹಾಗೂ ಸಾಂಖ್ಯಿಕ ವಿಭಾಗ ಸೇರಿ ವಿವಿಧ ಸಚಿವಾಲಯಗಳ ಸಿಬ್ಬಂದಿಗಳು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries