ಸಾಕಷ್ಟು ಜನರು ತಮ್ಮ ಮನೆಯಲ್ಲಿ ತುಂಬಾನೇ ಸರಾಗವಾಗಿ ಮಾತಾಡುತ್ತಾರೆ, ಅದೇ ಇಡೀ ತರಗತಿಯ ಮುಂದೆ ಬಂದು ಮಾತನಾಡುವ ಪ್ರಸಂಗ ಬಂದರೆ ಸಾಕು ಅವರು ತುಂಬಾನೇ ಭಯ (Fear), ಆತಂಕ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆ. ಅದರಲ್ಲೂ ಯಾವುದಾದರೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಮುಂಚೆ ಅಂತೂ ಅವರು ತುಂಬಾನೇ ನರ್ವಸ್ ಆಗಿರ್ತಾರೆ.
ಈ ರೀತಿಯ ಸಮಯದಲ್ಲಿ ನಿಮ್ಮ ದೇಹವು ಉತ್ಪಾದಿಸುವ "ಒತ್ತಡದ ಹಾರ್ಮೋನು" ಎಂದರೆ ಅಡ್ರಿನಾಲಿನ್ ವಾಸ್ತವವಾಗಿ ನಿಮಗೆ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.
ಆದರೆ ಪ್ರದರ್ಶನದ ಬಗ್ಗೆ ಚಿಂತೆ ಮತ್ತು ಒತ್ತಡವು ತುಂಬಾ ಹೆಚ್ಚಾದಾಗ, ಈ ಹಾರ್ಮೋನುಗಳು ಅನೇಕ ಜನರಿಗೆ ಎಚ್ಚರಿಕೆ ಸಂಕೇತವನ್ನು ನೀಡುತ್ತದೆ. ಇದು ಅನೇಕರಿಗೆ ಬೆವರುವಂತೆ ಮಾಡುತ್ತದೆ ಮತ್ತು ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದ ಹಾಗೆ ಅನ್ನಿಸಲು ಶುರುವಾಗುತ್ತದೆ.
ಇಂತಹ ಭಾವನೆಯನ್ನು ಸಮರ್ಥವಾಗಿ ನಿರ್ವಹಿಸಲು ಇಲ್ಲಿವೆ ಸಲಹೆ
ಚೆನ್ನಾಗಿ ತಯಾರಾಗಿ: ನೀವು ಕಾರ್ಯಕ್ರಮ ನೀಡುವ ಮೊದಲು ಚೆನ್ನಾಗಿ ಸಿದ್ಧರಾಗಿದ್ದರೆ, ನೀವು ನರ್ವಸ್ ಆಗುವ ಅವಕಾಶಗಳು ತುಂಬಾನೇ ಕಡಿಮೆ ಇರುತ್ತವೆ. ನಿಮಗೆ ಸಾಧ್ಯವಾದಷ್ಟು ಪೂರ್ವಾಭ್ಯಾಸ ಮಾಡಿ ಮತ್ತು ಏಕಾಂಗಿಯಾಗಿ ಅಥವಾ ಇತರರ ಮುಂದೆ ನಿಂತು ಪದೇ ಪದೇ ಅದನ್ನು ಅಭ್ಯಾಸ ಮಾಡಿ. ನಿಮ್ಮ ಬಗ್ಗೆ ನಿಮಗೆ ಆತ್ಮವಿಶ್ವಾಸ ಬಂದರೆ, ಆಗ ಎಲ್ಲಾ ಭಯವನ್ನು ಹೋಗಲಾಡಿಸುತ್ತದೆ.
ಧನಾತ್ಮಕ ಶಕ್ತಿಯನ್ನು ಬೆಳೆಸಿಕೊಳ್ಳಿ: ನೀವು ನೀಡುವ ಕಾರ್ಯಕ್ರಮದಲ್ಲಿ ಏನು ತಪ್ಪಾಗಬಹುದು ಎಂಬುದರ ಬಗ್ಗೆ ಯೋಚಿಸುವ ಬದಲು, ಸ್ವಲ್ಪ ಧನಾತ್ಮಕ ಶಕ್ತಿಯನ್ನು ಬೆಳೆಸಿಕೊಳ್ಳಿ. ಧನಾತ್ಮಕ ಶಕ್ತಿ ಬೆಳೆಸಿಕೊಳ್ಳುವುದರಿಂದ ನಿಮ್ಮ ಮತ್ತು ನಿಮ್ಮ ತಂಡದ ಮನೋಭಾವ ಬದಲಾಗುತ್ತದೆ.
ನೀವು ಏಕಾಂಗಿಯಾಗಿ ಅಥವಾ ಗುಂಪಿನ ಭಾಗವಾಗಿ ಪ್ರದರ್ಶನ ನೀಡುತ್ತಿರಲಿ, ಇದನ್ನು ನೀವು ಅಭ್ಯಾಸ ಮಾಡಬಹುದು. ನಿಮಗೆ ನೀವೇ "ನಾನು ಈ ಕಾರ್ಯಕ್ರಮ ನೀಡಲು ಪೂರ್ತಿಯಾಗಿ ಸಿದ್ದನಿದ್ದೇನೆ" ಅಂತ ಪದೇ ಪದೇ ಹೇಳಿಕೊಳ್ಳಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಬೆಳೆದು ಕಾರ್ಯಕ್ರಮವನ್ನು ಚೆನ್ನಾಗಿ ನಿಭಾಯಿಸುತ್ತೀರಿ.
ಭಯ ಮತ್ತು ಆತಂಕವನ್ನು ದೂರ ಮಾಡುವ ವಿಧಾನಗಳನ್ನು ತಿಳಿಯಿರಿ: ನೀವು ಕಾರ್ಯಕ್ರಮ ನೀಡುವ ಮೊದಲಿಗೆ ನಿಮ್ಮಲ್ಲಿರುವ ಭಯ ಮತ್ತು ಆತಂಕವನ್ನು ಹೋಗಲಾಡಿಸಿಕೊಳ್ಳಲು ಈ ಪ್ರದರ್ಶನಕ್ಕಾಗಿ ತಯಾರಿ ಮಾಡುವುದು ಎಷ್ಟು ಮುಖ್ಯ ಎಂಬುದರ ಕುರಿತು ಆಪ್ತರೊಂದಿಗೆ ಮಾತಾಡಿಕೊಳ್ಳಬೇಕು. ಕೆಲವು ರೀತಿಯ ಸ್ಪರ್ಧೆಗಳಲ್ಲಿ, ನಿಮ್ಮ ಪ್ರದರ್ಶನದ ಸರದಿ ಬರುವ ಮೊದಲು ಸಾಕಷ್ಟು ಕಾಯಬೇಕಾಗುತ್ತದೆ.
ಕೆಲವು ಜನರು ಸ್ಪೂರ್ತಿದಾಯಕ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ, ವಿಶ್ರಾಂತಿಗೆ ಸಹಾಯ ಮಾಡಲು ಒಳ್ಳೆಯ ಸಂಗೀತವನ್ನು ಕೇಳುತ್ತಾರೆ ಅಥವಾ ಅವರ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಸಹಾಯ ಮಾಡಲು ಯೋಗ ಮತ್ತು ಉಸಿರಾಟದ ತಂತ್ರಗಳನ್ನು ಕಲಿಯುತ್ತಾರೆ.
ನರ್ವಸ್ ಭಾವನೆಗಳ ಬಗ್ಗೆ ಚಿಂತಿಸಬೇಡಿ: ನೀವು ಕಾರ್ಯಕ್ರಮ ನೀಡುವ ಮೊದಲು ತುಂಬಾನೇ ನರ್ವಸ್ ಆದರೆ, ಆ ನರ್ವಸ್ ಭಾವನೆಯ ಬಗ್ಗೆ ಚಿಂತಿಸಬೇಡಿ. ಆ ಭಯದ ಭಾವನೆ ಕಾರ್ಯಕ್ರಮ ನೀಡುವ ಮೊದಲಿಗೆ ನಿಮ್ಮನ್ನು ಆವರಿಸಿಕೊಳ್ಳಲು ಬಿಡಬೇಡಿ. ಅದನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸುವುದು ನಿಮಗೆ ಬಿಟ್ಟದ್ದು ಎಂದು ತಿಳಿಯಿರಿ. ಅದನ್ನು ಮಾಡಲು ನಿಮ್ಮ ಸಕಾರಾತ್ಮಕ ಪೆಪ್-ಟಾಕ್ ಮತ್ತು ಶಾಂತಗೊಳಿಸುವ ತಂತ್ರಗಳನ್ನು ಬಳಸಿ.
ನಿಮ್ಮನ್ನು ನೀವು ನೋಡಿಕೊಳ್ಳಿ: ದೊಡ್ಡ ಪ್ರದರ್ಶನ ನೀಡುವ ಮೊದಲು ನೀವು ಪೂರ್ವಾಭ್ಯಾಸದಲ್ಲಿ ಹೆಚ್ಚು ಸಮಯವನ್ನು ಕಳೆಯುವುದರಿಂದ ನಿಮ್ಮ ಭಯ ಮತ್ತು ಆತಂಕವನ್ನು ದೂರ ಮಾಡಿಕೊಳ್ಳಬಹುದು. ನಿಮ್ಮ ಕಾರ್ಯಕ್ರಮಕ್ಕೆ ಮುನ್ನ ನೀವು ಚೆನ್ನಾಗಿ ನಿದ್ದೆ ಮಾಡಿದರೆ ಮತ್ತು ಆರೋಗ್ಯಕರ ಊಟವನ್ನು ಸೇವಿಸಿದರೆ ನೀವು ತುಂಬಾನೇ ಚೆನ್ನಾಗಿ ಕಾಣುತ್ತೀರಿ.
ಈ ರೀತಿಯ ವಿಶ್ರಾಂತಿ ನಿಮಗೆ ಒಳ್ಳೆಯದನ್ನು ಅನುಭವಿಸಲು ಸಹಾಯ ಮಾಡುತ್ತದೆ ಮತ್ತು ನಿದ್ರೆ ಮತ್ತು ಪೋಷಣೆಯ ಜೊತೆಗೆ, ಆ ಒತ್ತಡದ ಹಾರ್ಮೋನುಗಳನ್ನು ನಿಯಂತ್ರಣದಿಂದ ಹೊರಗಿಡುವ ಅತ್ಯುತ್ತಮ ಮಾರ್ಗವಾಗಿದೆ.