ಕಾಸರಗೋಡು: ಕುವೈತ್ ನಲ್ಲಿ ಅಗ್ನಿ ದುರಂತದಲ್ಲಿ ಮೃತಪಟ್ಟ ದಕ್ಷಿಣ ತ್ರಿಕರಿಪುರದ ತೆಕ್ಕುಂಬಾಟ್ ನಿವಾಸಿ ಪಿ.ಕುಞÂಕೇಳು ಹಾಗೂ ದುರಂತದಲ್ಲಿ ಗಾಯಗಳೊಮದಿಗೆ ಪಾರಾಗಿರುವ ಒಲವರ ನಿವಾಸಿ ನಳಿನಾಕ್ಷನ್ ಅವರ ಮನೆಗೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಶುಕ್ರವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕುಞÂಕೇಳು ಅವರ ಪತ್ನಿ ಕೆ.ಎನ್.ಮಣಿ, ಪುತ್ರರಾದ ರಿಷಿಕೇಶ್, ದೇವ ಕಿರಣ್ ಅವರ ಸಂಬಂಧಿಕರಲ್ಲಿ ಜಿಲ್ಲಾಧಿಕಾರಿ ಧೈರ್ಯ ತುಂಬಿದರು. ಬೆಂಕಿ ಹೊತ್ತಿಕೊಂಡ ಕಟ್ಟಡದಿಂದ ಜಿಗಿದು ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ನಳಿನಾಕ್ಷನ್ ಅವರ ಮನೆಗೂ ಜಿಲ್ಲಾಧಿಕಾರಿ ಭೇಟಿ ನೀಡಿ ಮನೆಯವರು ಹಾಗೂ ಸಂಬಂಧಿಕರಲ್ಲಿ ನಳಿನಾಕ್ಷನ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.