HEALTH TIPS

ಕೇಂದ್ರ ಸಚಿವರಾಗಿ ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ ಪ್ರಮಾಣ

 ಮೋದಿ ಸಂಪುಟ ಸೇರಿದ ಸಚಿವರ ಪಟ್ಟಿ

ರಾಜನಾಥ್‌ ಸಿಂಗ್‌, ಅಮಿತ್‌ ಶಾ, ನಿತಿನ್‌ ಗಡ್ಕರಿ, ಮನಸುಖ್‌ ಮಾಂಡವೀಯ, ಅಶ್ವಿನಿ ವೈಷ್ಣವ್‌, ನಿರ್ಮಲಾ ಸೀತಾರಾಮನ್‌, ಎಸ್‌.ಜೈಶಂಕರ್‌, ಪಿಯೂಷ್ ಗೋಯಲ್‌, ಜಿತೇಂದ್ರ ಸಿಂಗ್‌, ಶಿವರಾಜ್‌ ಸಿಂಗ್‌ ಚೌಹಾಣ್‌, ಹರದೀಪ್‌ ಸಿಂಗ್‌ ಪುರಿ, ಎಚ್‌.ಡಿ.ಕುಮಾರಸ್ವಾಮಿ, ಚಿರಾಗ್‌ ಪಸ್ವಾನ್‌, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್‌ ರಿಜುಜು, ಗಿರಿರಾಜ್‌ ಸಿಂಗ್‌, ಜಯಂತ್ ಚೌಧರಿ, ಕೆ.ಅಣ್ಣಾಮಲೈ, ಎಂ.ಎಲ್.ಖಟ್ಟರ್‌, ಸುರೇಶ್‌ ಗೋಪಿ, ಜೀತನ್‌ ರಾಮ್‌ ಮಾಂಝಿ, ರಾಮನಾಥ್‌ ಠಾಕೂರ್, ಜಿ.ಕಿಶನ್‌ ರೆಡ್ಡಿ, ಬಂಡಿ ಸಂಜಯ್‌, ಅರುಣ್‌ ರಾಮ್‌ ಮೇಘವಾಲ್‌, ಪ್ರಲ್ಹಾದ ಜೋಶಿ, ಚಂದ್ರಶೇಖರ್‌ ಚೌಧರಿ, ಚಂದ್ರಶೇಖರ್‌ ಪೆಮ್ಮಸಾನಿ, ರಾಮ್‌ ಮೋಹನ್‌ ನಾಯ್ಡು, ರವನೀತ್‌ ಸಿಮಗ್‌ ಬಿಟ್ಟು, ಅನುಪ್ರಿಯಾ ಪಟೇಲ್‌, ಪ್ರತಾಪ್‌ ರಾವ್‌ ಜಾಧವ್‌, ಅನ್ನಪೂರ್ಣಾ ದೇವಿ, ರಕ್ಷಾ ಖಾಡ್ಸೆ, ಶೋಭಾ ಕರಂದ್ಲಾಜೆ, ಕಮಲಜೀತ್‌ ಸೆಹ್ರಾವತ್, ರಾವ್‌ ಇಂದ್ರಜಿತ್‌ ಸಿಂಗ್‌, ರಾಮ್‌ ದಾಸ್‌ ಅಠವಾಲೆ ಮತ್ತು ಹರ್ಷ ಮಲ್ಹೋತ್ರಾ ಅವರು ಮೋದಿ ಸಂಪುಟಕ್ಕೆ ಸೇರಿದ್ದಾರೆ.

ಕೇಂದ್ರ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಪ್ರಮಾಣವಚನ ಸ್ವೀಕಾರ

ಸಂಪುಟದರ್ಜೆ ಸಚಿವರಾಗಿ ಪ್ರಲ್ಹಾದ್ ಜೋಶಿ ಪ್ರಮಾಣವಚನ ಸ್ವೀಕಾರ

ಕೇಂದ್ರ ಸಚಿವರಾಗಿ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣ

ಮಂಡ್ಯ ಲೋಕಸಭಾ ಕ್ಷೇತ್ರ ಸಮಸ ಎಚ್‌.ಡಿ. ಕುಮಾರಸ್ವಾಮಿ ಕೇಂದ್ರ ಸಂಪುಟ ದರ್ಜೆ ಸಚಿವರಾಗಿ ದೇವರ ಹೆಸರಿನಲ್ಮಿಲಣವಚನ ಸ್ವೀಕರಿಸಿದರು.

ಸಂಪುಟಕ್ಕೆ ಮರಳಿದ ಜೆ.ಪಿ. ನಡ್ಡಾ

* ಮೋದಿ ಬೆನ್ನಲ್ಲೇ ಅಮಿತ್ ಶಾ, ರಾಜನಾಥ್ ಸಿಂಗ್, ಜೆ.ಪಿ. ನಡ್ಡಾ, ನಿತಿನ್ ಗಡ್ಕರಿ ಪ್ರಮಾಣವಚನ ಸ್ವೀಕರಿಸಿದರು.

3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೋದಿ

,

ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ತೆರಳಿರುವ ಉಮ್ಮತ್ತೂರು ವರ್ಷಾ

ರಾಜ್ಯದ ಐವರಿಗೆ ಸಚಿವ ಸ್ಥಾನ ಖಚಿತ

ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಸತತ ಮೂರನೇ ಇಂದು ರಾತ್ರಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜ್ಯದ ಐವರಿಗೆ ಸಚಿವ ಸ್ಥಾನ ಖಾತ್ರಿಯಾಗಿದೆ.

ರಾಜ್ಯಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ನಿರ್ಮಲಾ ಸಿತಾರಾಮನ್‌, ಧಾರವಾಡ ಸಂಸದ ಪಲ್ಹಾದ ಜೋಶಿ, ತುಮಕೂರು ಸಂಸದ ವಿ.ಸೋಮಣ್ಣ, ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮಿತ್ರ ಪಕ್ಷವಾಗಿರುವ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ನಿರ್ಮಲಾ, ಜೋಶಿ, ಸೋಮಣ್ಣ ಮತ್ತು ಕುಮಾರಸ್ವಾಮಿ ಅವರಿಗೆ ಸಂಪುಟದರ್ಜೆ ಸ್ಥಾನಮಾನ ಹಾಗೂ ಶೋಭಾ ಅವರಿಗೆ ರಾಜ್ಯ ಖಾತೆ ನೀಡಲಾಗಿದೆ.

ರಾಷ್ಟ್ರಪತಿ ಭವನದಲ್ಲಿ ಇಂದು ರಾತ್ರಿ ನಡೆಯಲಿರುವ ಸಮಾರಂಭದಲ್ಲಿ ಮೋದಿ ಅವರು (ರಾತ್ರಿ 7.15ಕ್ಕೆ) ಪ್ರಮಾಣ ಸ್ವೀಕರಿಸಲಿದ್ದಾರೆ.

ರಾಜ್ಯದಿಂದ ಐವರಿಗೆ ಸಚಿವ ಸ್ಥಾನ?

ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಮಧ್ಯಾಹ್ನ ಸಂಭಾವ್ಯ ಸಚಿವರಿಗೆ ನರೇಂದ್ರ ಮೋದಿ, ಚಹಾಕೂಟ ಏರ್ಪಡಿಸಿದ್ದರು. ಕೂಟದಲ್ಲಿ ಸಂಸದರಾದ ಎಚ್‌.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ'. ಶೋಭಾ ಕರಂದ್ಲಾಜೆ, ಪ್ರಲ್ಹಾದ್ ಜೋಶಿ ಮತ್ತು ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಭಾಹವಹಿಸಿದ್ದರು.

ರಾತ್ರಿ 7.15ಕ್ಕೆಪ್ರಧಾನಿಯಾಗಿ ಮೋದಿ ‍ಪ್ರಮಾಣವಚನ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಂದು ರಾತ್ರಿ 7.15ಕ್ಕೆ ನಡೆಯುವ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಮೈತ್ರಿ ಸರ್ಕಾರದ ಸಂಪುಟಕ್ಕೆ ಸುಮಾರು 30 ಮಂದಿ ಸೇರ್ಪಡೆಯಾಗಲಿದ್ದಾರೆ. ಮೊದಲ ಹಂತದಲ್ಲಿ ಮಿತ್ರ ಪಕ್ಷಗಳ 12ರಿಂದ 15 ಸದಸ್ಯರು ಸಂಪುಟಕ್ಕೆ ಸೇರುವ ಸಂಭವ ಇದೆ.

ಸಂಪುಟಕ್ಕೆ ಸೇರುವವರ ಹೆಸರನ್ನು ಅಂತಿಮಗೊಳಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪಕ್ಷದ ನಾಯಕ ಅಮಿತ್‌ ಶಾ ಅವರು ಶನಿವಾರ ಸರಣಿ ಸಭೆಗಳನ್ನು ನಡೆಸಿದರು. ಟಿಡಿಪಿ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು, ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಅವರೊಂದಿಗೆ ಸಮಾಲೋಚನೆ ನಡೆಸಿ ಸಚಿವರ ಪಟ್ಟಿಗೆ ಅಂತಿಮ ರೂಪ ನೀಡುವ ಕಸರತ್ತು ನಡೆಸಿದರು. ಬಳಿಕ ಸಂಭಾವ್ಯ ಸಚಿವರ ಪಟ್ಟಿಯನ್ನು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದರು. ಮೋದಿ ಅವರು ಈ ಪಟ್ಟಿಯನ್ನು ಭಾನುವಾರ ಬೆಳಿಗ್ಗೆ ರಾಷ್ಟ್ರಪತಿ ಭವನಕ್ಕೆ ಕಳುಹಿಸಲಿದ್ದಾರೆ.

ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅವಧಿ ಜೂನ್‌ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಅವರು ಕೇಂದ್ರದ ಸಂಪುಟಕ್ಕೆ ಸೇರುವ ಸಾಧ್ಯತೆ ದಟ್ಟವಾಗಿದೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಶಿವರಾಜ್ ಸಿಂಗ್‌ ಚೌಹಾಣ್ ಹೆಸರು ಮುಂಚೂಣಿಯಲ್ಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries