ಮುಂಬೈ: ಪುಣೆ- ಚಂಡೀಗಢ ವಿಮಾನದಲ್ಲಿ ಅಸ್ವಸ್ಥರಾಗಿದ್ದ 27 ವರ್ಷದ ಪ್ರಯಾಣಿಕರೊಬ್ಬರ ಪ್ರಾಣವನ್ನು ಅದೇ ವಿಮಾನದಲ್ಲಿದ್ದ ಸೇನಾ ವೈದ್ಯರೊಬ್ಬರು ತುರ್ತು ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದಾರೆ. ಬಳಿಕ ವಿಮಾನ ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.

'ಇಂಡಿಗೋ ವಿಮಾನದಲ್ಲಿ ನಾನು ಪುಣೆಯಿಂದ ಚಂಡೀಗಢಕ್ಕೆ ಪ್ರಯಾಣಿಸುತ್ತಿದ್ದೆ.
ರೋಗಿ ಅಧಿಕ ದ್ರವ ಪದಾರ್ಥ ಸೇವನೆ ಮತ್ತು ಅರೆ ನಿದ್ರಾವಸ್ಥೆಯಲ್ಲಿದ್ದರು. ಜತೆಗೆ ಅಧಿಕ ರಕ್ತದೊತ್ತಡ, ಹೃದಯಬಡಿತದಲ್ಲಿ ಹೆಚ್ಚಳ ಹಾಗೂ ಅಸಪರ್ಮಕ ಉಸಿರಾಟ ಸಮಸ್ಯೆಯನ್ನು ಸಹ ಹೊಂದಿದ್ದರು. ಪರಿಣಾಮ ಉಸಿರುಗಟ್ಟುವಿಕೆ ಉಂಟಾಗಿದೆ. ವಿಮಾನ ಸಿಬ್ಬಂದಿ ಬಳಿ ಇದ್ದ ವೈದ್ಯಕೀಯ ಕಿಟ್‌ನಲ್ಲಿ ಹಲವು ರೀತಿಯ ಔಷಧ ಮತ್ತು ಅಗತ್ಯ ಉಪಕರಣಗಳಿದ್ದವು. ಅವುಗಳ ಸಹಾಯದಿಂದ ಚಿಕಿತ್ಸೆ ನೀಡಲಾಯಿತು. ತಕ್ಷಣವೇ ಸಿಬ್ಬಂದಿ ಗಮನಕ್ಕೆ ತಂದು ವಿಮಾನವನ್ನು ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಲಾಯಿತು. ಬಳಿಕ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಸಿಮ್ರತ್ ಅವರು ಪಿಟಿಐಗೆ ಮಾಹಿತಿ ನೀಡಿದ್ದಾರೆ.