ತ್ರಿಶೂರ್: ತ್ರಿಶೂರ್ ಜಿಲ್ಲೆಯ ವಿವಿಧೆಡೆ ಮತ್ತೆ ಭೂಕಂಪ ಉಂಟಾಗಿದೆ. ಇಂದು ನಸುಕಿನ 3.55ರ ಸುಮಾರಿಗೆ ಕಂಪನದ ಅನುಭವವಾಗಿದೆ. ಕುನ್ನಂಕುಳಂ, ಎರುಮಪೆಟ್ಟಿ, ವೆಲ್ಲೂರು ಮತ್ತು ವಡಕಂಚೇರಿ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ನಿನ್ನೆ ಬೆಳಗ್ಗೆಯೂ ಜಿಲ್ಲೆಯಲ್ಲಿ ಸ್ವಲ್ಪ ಪ್ರಮಾಣದ ಭೂಚಲನ ಕಂಡುಬಂದಿತ್ತು.
ಪಾಲಕ್ಕಾಡ್ ಜಿಲ್ಲೆಯ ತ್ರಿತಲ, ತಿರುಮಿಟಕೋಡ್ ಮತ್ತು ಅನಕ್ಕರ ಪ್ರದೇಶಗಳಲ್ಲೂ ಭೂಕಂಪನದ ಅನುಭವವಾಗಿದೆ. ಯಾವುದೇ ಪ್ರಾಣಹಾನಿ ಅಥವಾ ಇತರ ಹಾನಿಯ ಬಗ್ಗೆ ವರದಿಯಾಗಿಲ್ಲ.