ಕಾಸರಗೋಡು: ಪಯ್ಯನ್ನೂರು ಎಟ್ಟಿಕುಳಂ ಎಂಬಲ್ಲಿ ಮಲಗುವ ಕೊಠಡಿಯಲ್ಲಿನ ಸೀಲಿಂಗ್ ಪ್ಯಾನ್ ಮೇಲ್ಚಾವಣಿಯ ಸಿಮೆಂಟ್ ಸ್ಲ್ಯಾಬ್ ಸಹಿತ ಕಳಚಿಬಿದ್ದು, ಮನೆಮಾಲಿಕ ದಾರುಣವಾಗಿ ಮೃತಪಟ್ಟಿದ್ದಾರೆ. ಎಟ್ಟಿಕುಳಂ ಅಂಬಲಪ್ಪಾರ ನಿವಾಸಿ ಎ.ಕೆ ಮಹಮ್ಮದ್ ಶಮೀರ್(48)ಮೃತಪಟ್ಟವರು. ಪತ್ನಿ ಹಾಗೂ ಮಕ್ಕಳು ಶಾಲಾ ಸಮವಸ್ತ್ರ ಖರೀದಿಗೆ ಪೇಟೆಗೆ ತೆರಳಿದ್ದ ಸಂದರ್ಭ ಶಬ್ದದೊಂದಿಗೆ ಫ್ಯಾನ್ ಕಳಚಿಬಿದ್ದಿದ್ದು, ತಕ್ಷಣ ಮನೆಯಲ್ಲಿ ಕೆಲಸಕ್ಕಿದ್ದವರು ಆಗಮಿಸಿ ಮಹಮ್ಮದ್ ಶಮೀರ್ ಅವರನ್ನು ಉಪಚರಿಸಿ ಜೀವಾಪಾಯವಿಲ್ಲದಿರುವುದನ್ನು ಖಚಿತಪಡಿಸಿದ ನಂತರ ಫ್ಯಾನ್ ಕಳಚಿಬಿದ್ದ ಕಾಂಕ್ರೀಟ್ ಪುಡಿ ಸಂಗ್ರಹಿಸಿ ಶುಚೀಕರಿಸಿದ್ದಾರೆ. ಈ ಸಂದರ್ಭ ಖರೀದಿಗಾಗಿ ತೆರಳಿದ್ದ ಪತ್ನಿ ಮತ್ತು ಮಕ್ಕಳು ವಾಪಸಾಗಿದ್ದು, ಈ ಸಂದರ್ಭವೂ ತನಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದರು. ಅಲ್ಪ ಹೊತ್ತಿನಲ್ಲಿ ನೋವು ಹೆಚ್ಚಾಗತೊಡಗಿದ್ದು, ತಕ್ಷಣ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಎ.ಕೆ ಮಹಮ್ಮದ್ ಶಮೀರ್ ಪೋಲಿಶ್ ಕೆಲಸ ನಿರ್ವಹಿಸುತ್ತಿದ್ದರು.