ತ್ರಿಶೂರ್: ಪೂರಂ ಗಲಭೆ ಘಟನೆಯ ತನಿಖೆಗಾಗಿ ಹಿಂದೂ ಸಂಘಟನೆಗಳು ಸತ್ಯಶೋಧನಾ ಸಮಿತಿಯನ್ನು ರಚಿಸಿವೆ. ಪೂರಂ ಸಮಾರಂಭಗಳಲ್ಲಿ ಅಹಿತಕರ ಘಟನೆಗಳು, ಪೆÇಲೀಸ್ ಲಾಠಿ ಚಾರ್ಜ್, ಸಮಯಕ್ಕೆ ಸರಿಯಾಗಿ ಸಿಡಿಮದ್ದು ಸಿಡಿಸದೇ ಇರುವುದು ಮೊದಲಾದವುಗಳ ನಿರ್ವಹಣೆಯಲ್ಲಿ ಎದುರಾಗುವ ಸವಾಲುಗಳ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ.
ಹಿಂದೂ ಸಂಘಟನೆಗಳ ಜಂಟಿ ಸಭೆಯಲ್ಲಿ ಸಮಿತಿಯನ್ನು ನೇಮಿಸಲಾಗಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ರವೀಂದ್ರನ್ ಅಧ್ಯಕ್ಷತೆಯ ಸಮಿತಿಯಲ್ಲಿ ನ್ಯಾಯಮೂರ್ತಿ ಎ.ಹರಿಪ್ರಸಾದ್, ಪಿ.ವೇಣುಗೋಪಾಲ್ ಐಎಎಸ್, ಡಾ.ಎಂ. ಲಕ್ಷ್ಮೀ ಕುಮಾರಿ, ಕೆ.ಎನ್. ಬಾಲ್ (ಐಪಿಎಸ್ ನಿವೃತ್ತ) ಮತ್ತು ಶ್ರೀಜಿತ್ ಪಣಿಕ್ಕರ್ (ಸಾಮಾಜಿಕ ವೀಕ್ಷಕ) ಸಮಿತಿಯ ಸದಸ್ಯರಾಗಿದ್ದಾರೆ. ಹೈಕೋರ್ಟ್‍ನ ಹಿರಿಯ ವಕೀಲ ಅಡ್ವ. ಸಿ. ರಾಜೇಂದ್ರನ್ ಸಮಿತಿಯ ಕಾರ್ಯದರ್ಶಿ.
ತ್ರಿಶೂರ್ ಪೂರಂ ನಿರ್ವಹಣೆಯಲ್ಲಿ ಗಂಭೀರ ವೈಫಲ್ಯವಾಗಿರುವ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಈ ಕ್ರಮಕ್ಕೆ ಮುಂದಾಗಿವೆ. ಅದರ ಇತಿಹಾಸದಲ್ಲಿ ಮೊದಲ ಬಾರಿಗೆ, ತ್ರಿಶೂರ್ ಪೂರಂ ಸಮಾರಂಭವನ್ನು ಸ್ಥಗಿತಗೊಳಿಸಲಾಯಿತು ಮತ್ತು ಸಿಡಿಮದ್ದು ಸಿಡಿಸುವುದು ಸೇರಿದಂತೆ ಭಾರಿ ವಿಳಂಬವಾಯಿತು.