ಕಾಸರಗೋಡು: ಕೇರಳ ರಾಜಕೀಯದಲ್ಲಿ ಅಲ್ಪಸಂಖ್ಯಾತ ಕೋಮು ವಿಭಾಗದವರ ಓಲೈಕೆಗೆ ಎಡರಂಗ ಹಾಗೂ ಐಕ್ಯರಂಗ ಪೈಪೋಟಿಗಿಳಿದು ಕಾರ್ಯಾಚರಿಸುತ್ತಿದೆ ಎಂಬ ಸತ್ಯ ಬಹಿರಂಗಪಡಿಸಿದ ಎಸ್‍ಎನ್‍ಡಿಪಿ ಯೋಗಂ ಅಧ್ಯಕ್ಷ ವೆಳ್ಳಾಪಳ್ಳಿ ನಟೇಶನ್ ಅವರನ್ನು ಬೇಟೆಯಾಡಲು ಯಾವುದೇ ಶಕ್ತಿಗೂ ಅವಕಾಶ ನೀಡುವುದಿಲ್ಲ ಎಂಬುದಾಗಿ ಬಿಡಿಜೆಎಸ್ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಪಾರೆಕಟ್ಟ ತಿಳಿಸಿದ್ದಾರೆ.
ಅವರು ಕಾಞಂಗಾಡು ಅತಿಥಿಗೃಹದಲ್ಲಿ ನಡೆದ ಬಿಡಿಜೆಎಸ್ ಕಾಸರಗೋಡು ಜಿಲ್ಲೆಯ ಮಂಡಲ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂದಿನ ಸ್ಥಳೀಯಾಡಳಿತ ಚುನವಣೆಯಲ್ಲಿ ಪಕ್ಷದ ಚಟುವಟಿಕೆಯನ್ನು ಬಲಪಡಿಸಲು ಸಭೆ ತೀರ್ಮಾನಿಸಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣನ್ ಕರಿಂದಳಂ, ಕೋಶಾಧಿಕಾರಿ ಕುಞÂಕೃಷ್ಣನ್ ಕಪ್ಪಣಕ್ಕಲ್, ಕಾರ್ಯದರ್ಶಿ ಜೋಷಿ, ಉಪಧ್ಯಕ್ಷ ಪಿ.ಕೆ ವಿಜಯನ್ ಕೃಷ್ಣನ್, ಸುರೇಂದ್ರನ್ ಕಾಞಂಗಾಡ್, ರಾಜೇಶ್ ಕಾಞಂಗಾಡ್, ರವಿ ಉಪಸ್ಥಿತರಿದ್ದರು. ನಾರಾಯಣನ್ ಸ್ವಾಗತಿಸಿದರು. ರವಿ ವಂದಿಸಿದರು.
ಕಾಸರಗೋಡು ಯೂನಿಯನ್ ಖಂಡನೆ:
ಕೇರಳ ರಾಜಕೀಯದಲ್ಲಿ ನಡೆಯುತ್ತಿರುವ ತುಷ್ಠೀಕರಣದ ಹೇಳಿಕೆ ಬಗ್ಗೆ ಕೆಲವು ಶಕ್ತಿಗಳು ವೆಳ್ಳಾಪಳ್ಳಿ ನಟೇಶನ್ ವಿರುದ್ಧ ನೀಡುತ್ತಿರುವ ಹೇಳಿಕೆಯನ್ನು ಎಸ್‍ಎನ್‍ಡಿಪಿ ಕಾಸರಗೋಡು ಯೂನಿಯನ್ ಖಂಡಿಸಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಕೆ. ನಾರಾಯಣ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು ಎ.ಟಿ ವಇಜಯನ್ ಠರಾವು ಮಂಡಿಸಿದರು. ಎ.ಕೆ ವಿಜಯನ್, ಜಯಂತ ಪಚ್ಚಂಬಳ ಉಪಸ್ಥಿತರಿದ್ದರು.