ಕರಾಚಿ: ಮೇವು ಅರಸಿ ತನ್ನ ಜಮೀನಿಗೆ ಪ್ರವೇಶಿಸಿದ್ದ ಒಂಟೆಯೊಂದರ ಕಾಲನ್ನೇ ಭೂ ಮಾಲೀಕನು ಕತ್ತರಿಸಿರುವ ಕೃತ್ಯ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ. ಭೂಮಾಲೀಕ ಹಾಗೂ ಆತನ ಐವರು ನೌಕರರನ್ನು ಪೊಲೀಸರು ಬಂಧಿಸಿದ್ದಾರೆ.
ಕರಾಚಿ: ಮೇವು ಅರಸಿ ತನ್ನ ಜಮೀನಿಗೆ ಪ್ರವೇಶಿಸಿದ್ದ ಒಂಟೆಯೊಂದರ ಕಾಲನ್ನೇ ಭೂ ಮಾಲೀಕನು ಕತ್ತರಿಸಿರುವ ಕೃತ್ಯ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ. ಭೂಮಾಲೀಕ ಹಾಗೂ ಆತನ ಐವರು ನೌಕರರನ್ನು ಪೊಲೀಸರು ಬಂಧಿಸಿದ್ದಾರೆ.
ಸಿಂಧ್ ಪ್ರಾಂತ್ಯದ ಮುಂದ್ ಜಾಮ್ರಾವೊ ಗ್ರಾಮದಲ್ಲಿ ನಡೆದಿರುವ ಈ ಕೃತ್ಯವು ಪ್ರಾಂತ್ಯದ ಪ್ರಮುಖ ರಾಜಕೀಯ ನಾಯಕರ ಗಮನವನ್ನು ಸೆಳೆದಿದೆ.
ಒಂಟೆಯ ಮುಂಭಾಗದ ಬಲಗಾಲನ್ನು ಕತ್ತರಿಸಿದ್ದ ಭೂಮಾಲೀಕ ರುಸ್ತುಮ್ ಶಾರ್ ಮತ್ತು ಆತನ ಐವರು ನೌಕರರು, ತಮ್ಮ ಕೃತ್ಯದ ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಅದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಒಂಟೆಯನ್ನು ಸಾಕಿಕೊಂಡಿದ್ದ ಸೂಮರ್ ಬೆಹನ್ ಎಂಬಾತ ಈ ಕೃತ್ಯದ ಕುರಿತು ಯಾವುದೇ ದೂರು ದಾಖಲಿಸಿಲ್ಲ. ಆದರೆ, ಕೃತ್ಯ ಬಯಲಾಗುತ್ತಿದ್ದಂತೆ ಅಧಿಕಾರಿಗಳೇ ಆತನನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ.
'ಒಂಟೆಯನ್ನು ಸದ್ಯ ಕರಾಚಿಯಲ್ಲಿನ ಪ್ರಾಣಿ ಆರೈಕೆ ಶಿಬಿರಕ್ಕೆ ಸಾಗಿಸಲಾಗಿದೆ. ದುಬೈನಿಂದ ಕೃತಕ ಕಾಲು ತರಿಸಲು ವ್ಯವಸ್ಥೆ ಮಾಡಲಾಗಿದೆ. ಬರುತ್ತಲೇ ಜೋಡಿಸಲಾಗುವುದು' ಎಂದು ಪಶುಸಂಗೋಪನಾ ವಿಭಾಗದ ಕಾರ್ಯದರ್ಶಿ ಕಾಜೀಂ ಜಾಟೊ ಹೇಳಿದ್ದಾರೆ.