ಮಂಜೇಶ್ವರ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿದ್ಯಾವರ್ಧಕ ಎ.ಯು.ಪಿ ಶಾಲೆ ಮೀಯಪದವಿನಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ಯಂ.ರಾಮಕೃಷ್ಣರಾವ್ ಸಭಾಂಗಣದಲ್ಲಿ ಜರಗಿತು.
ಯೋಗ ತರಬೇತಿಯ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಅವರು ಔಪಚಾರಿಕವಾಗಿ ಉದ್ಘಾಟಿಸಿ ಯೋಗದ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿದರು. ಶಾಲಾ ಸಂಪನ್ಮೂಲ ತಂಡದ ಸಂಚಾಲಕÀೀ ಶಿಹಾಬುದ್ದೀನ್ ಹಾಗೂ ಸ್ವಾತಿ ಟಿ ಉಪಸ್ಥಿತರಿದ್ದರು.
ಅಧ್ಯಾಪಕರಾದ ಸುನಿಲ್ ಕುಮಾರ್ ಯಂ ಸ್ವಾಗತಿಸಿ ನಿರೂಪಿಸಿದರು. ಅಧ್ಯಾಪಕ ಶಿವಸುಬ್ರಹ್ಮಣ್ಯ ಪ್ರಸಾದ್ ವಂದಿಸಿದರು. ಅಧ್ಯಾಪಕರಾದ ಯೋಗ ಗುರು ವಿನಯಕೃಷ್ಣ.ಎಸ್ ವಿದ್ಯಾರ್ಥಿಗಳಿಗೆ ಯೋಗದ ಆಸನಗಳನ್ನು ಹೇಳಿಕೊಟ್ಟು ಯೋಗದ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿಯನ್ನು ಮೂಡಿಸಿದರು. ಶಾಲಾ ಅಧ್ಯಾಪಕ, ಅಧ್ಯಾಪಿಕೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ಸಿಗೆ ಸಹಕರಿಸಿದರು.