ಪುಣೆ: ಪುಣೆಯಲ್ಲಿ ಅನುಮತಿಯ ಅವಧಿ ಮೀರಿ ತೆರೆದಿದ್ದ ಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಇಬ್ಬರು ಇನ್‌ಸ್ಪೆಕ್ಟರ್ ಶ್ರೇಣಿಯ ಅಧಿಕಾರಿಗಳನ್ನು ಮಹಾರಾಷ್ಟ್ರ ಅಬಕಾರಿ ಇಲಾಖೆ ಅಮಾನತುಗೊಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುಣೆ: ಪುಣೆಯಲ್ಲಿ ಅನುಮತಿಯ ಅವಧಿ ಮೀರಿ ತೆರೆದಿದ್ದ ಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಇಬ್ಬರು ಇನ್‌ಸ್ಪೆಕ್ಟರ್ ಶ್ರೇಣಿಯ ಅಧಿಕಾರಿಗಳನ್ನು ಮಹಾರಾಷ್ಟ್ರ ಅಬಕಾರಿ ಇಲಾಖೆ ಅಮಾನತುಗೊಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫರ್ಗ್ಯುಸನ್ ಕಾಲೇಜು ರಸ್ತೆಯಲ್ಲಿ ಇರುವ 'ಲಿಕ್ವಿಡ್ ಲೀಷರ್ ಲೌಂಜ್' (ಎಲ್3) ಬಾರ್‌ನಿಂದ ಸುಮಾರು 241 ಲೀಟರ್ ವಿದೇಶಿ ಮಧ್ಯ ಹಾಗೂ ₹F3 ಲಕ್ಷ ಮೌಲ್ಯದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ, ಬಾರ್ ಪರವಾನಗಿಯನ್ನು ರದ್ದುಗೊಳಿಸಲಾಗಿದೆ' ಎಂದು ಅವರು ಹೇಳಿದ್ದಾರೆ.
ಲಿಕ್ವಿಡ್ ಲೀಷರ್ ಲಾಂಜ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಇಲಾಖೆಯ ಇನ್‌ಸ್ಪೆಕ್ಟರ್ ಮತ್ತು ಸಬ್ ಇನ್‌ಸ್ಪೆಕ್ಟರ್ ಶ್ರೇಣಿಯ ಅಧಿಕಾರಿಗಳನ್ನು ರಾಜ್ಯ ಅಬಕಾರಿ ಆಯುಕ್ತರು ಅಮಾನತುಗೊಳಿಸಿದ್ದಾರೆ ಎಂದು ಪುಣೆ ವಿಭಾಗದ ಅಬಕಾರಿ ಅಧೀಕ್ಷಕ ಚರಣ್‌ಸಿಂಗ್ ರಜಪೂತ್ ತಿಳಿಸಿದ್ದಾರೆ.
'ಲಿಕ್ವಿಡ್ ಲೀಷರ್ ಲೌಂಜ್' (ಎಲ್3) ಬಾರ್‌ನಲ್ಲಿ ಕೆಲವರು ಮಾದಕ ಪದಾರ್ಥವನ್ನು ಹೋಲುವ ವಸ್ತುಗಳನ್ನು ಹೊಂದಿರುವ ವಿಡಿಯೊ ಒಂದು ವ್ಯಾಪಕವಾಗಿ ಹರಿದಾಡಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಪುಣೆಯ ಬಾರ್‌ವೊಂದು ಅನುಮತಿಯ ಅವಧಿ ಮೀರಿ ಕಾರ್ಯನಿರ್ವಹಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಎಂಟು ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ, ನಾಲ್ಕು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಮಹಾರಾಷ್ಟ್ರದ ಅಬಕಾರಿ ಇಲಾಖೆ ಅಧಿಕಾರಿಗಳು ಬಾರ್‌ನ ಆರು ಮಂದಿ ಕೆಲಸಗಾರರನ್ನು (ವೇಯ್ಟರ್) ಬಂಧಿಸಿದ್ದಾರೆ.
ಎಲ್3 ಬಾರ್ ಭಾನುವಾರ ಮುಂಜಾನೆ 5 ಗಂಟೆಯವರೆಗೂ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಪುಣೆಯಲ್ಲಿ ನಸುಕಿನ 1.30ರವರೆಗೂ ಮಾತ್ರ ಮದ್ಯ ಸರಬರಾಜು ಮಾಡಲು ಅವಕಾಶ ಇದೆ. ಆದರೆ, ಈ ಬಾರ್‌ನಲ್ಲಿ ಅವಧಿ ಮಿತಿ ಮೀರಿ ಮದ್ಯ ಪೂರೈಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.