HEALTH TIPS

ತಮಿಳುನಾಡು: ಅಕ್ರಮ ಮದ್ಯ ತಯಾರಿಕೆ ತಡೆಯಲು ಕಾನೂನಿಗೆ ತಿದ್ದುಪಡಿ

        ಚೆನ್ನೈ: ಜನರ ಜೀವಕ್ಕೆ ಕಂಟಕ ತರುವ ಅಕ್ರಮ ಮದ್ಯ ತಯಾರಿಕೆ, ಸಂಗ್ರಹ ಮತ್ತು ಮಾರಾಟಕ್ಕೆ ವಿಧಿಸಲಾಗುವ ಶಿಕ್ಷೆ ಮತ್ತು ದಂಡದ ಪ್ರಮಾಣ ಹೆಚ್ಚಿಸಲು ತಮಿಳುನಾಡು ನಿಷೇಧ ಕಾಯ್ದೆ-1937ಕ್ಕೆ ಸರ್ಕಾರವು ಶನಿವಾರ ತಿದ್ದುಪಡಿ ಮಾಡಿತು.

           ಸರ್ಕಾರವು ಅಧಿಸೂಚನೆ ಹೊರಡಿಸಿದ ದಿನದಿಂದ ತಮಿಳುನಾಡು ನಿಷೇಧ (ತಿದ್ದುಪಡಿ) ಕಾಯ್ದೆ-2024 ಜಾರಿಗೆ ಬರಲಿದ್ದು, ರಾಜ್ಯದಿಂದ ಅಕ್ರಮ ಮದ್ಯ ದಂಧೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವ ಗುರಿ ಹೊಂದಿದೆ.

             ಕಲ್ಲಕುರಿಚ್ಚಿ ಘಟನೆಯ ಹಿನ್ನೆಲೆಯಲ್ಲಿ ಸರ್ಕಾರವು ಕಾನೂನಿಗೆ ತಿದ್ದುಪಡಿ ತಂದಿದ್ದು, ಕಾಯ್ದೆಯ ಸೆಕ್ಷನ್ 4, 5, 6, 7 ಮತ್ತು 11ರ ಅಡಿ ಶಿಕ್ಷೆ ಮತ್ತು ದಂಡದ ಪ್ರಮಾಣ ಹೆಚ್ಚಿಸಬಹುದಾಗಿದೆ. ಕಾಯ್ದೆಯ ಅನ್ವಯ ಗರಿಷ್ಠ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹5 ಲಕ್ಷವರೆಗಿನ ದಂಡವನ್ನು ಪ್ರಸ್ತಾಪಿಸಲಾಗಿದೆ. ಸಚಿವ ಎಸ್‌. ಮುತ್ತುಸ್ವಾಮಿ ಮಂಡಿಸಿದ ಮಸೂದೆಯನ್ನು ನಂತರ ಸದನ ಅಂಗೀಕರಿಸಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries