ಪೆರ್ಲ: ಪಡ್ರೆ ಶ್ರೀಜಟಾಧಾರಿ ಮೂಲಸ್ಥಾನ ಮಲೆತ್ತಡ್ಕದಲ್ಲಿ ಮಿಥುನ ಮಾಸ 1 –ಇಂದು ಎಂದಿನಂತೆ ದುರ್ಗಾ ಪೂಜೆ, ಶ್ರೀ ದೈವಕ್ಕೆ ತಂಬಿಲ ಸೇವೆಗಳ ಅನಂತರ ಒಂದರ ಬಳಿಕ ಒಂದರಂತೆ ಎರಡು ಹರಕೆ ತಂಬಿಲಗಳು ನಡೆಯಲಿವೆ.
ಅಡ್ಯೆತಕಂಡ ನಾಗ,ಕೆಸರು ನಾಗ ಮತ್ತು ಪರಿವಾರ ದೈವಗಳಿಗೆ ಸಂಬಂಧಿಸಿ ವರ್ಷದ ಅವಧಿಗೆ ಪ್ರಾರ್ಥಿಸಿಕೊಂಡ ಅನುಜ್ಞೆಯನ್ನು ಮತ್ತೆ ವಿಸ್ತರಿಸಲು ಕ್ಷೇತ್ರದ ತಂತ್ರಿವರ್ಯರು ಸೂಚಿಸಿರುವುದರಿಂದ 'ತಿಂಗಳ ಪರ್ವ'ದಂದೇ ಆಶ್ಲೇಷಾ ಬಲಿ,ಬನಗಳಲ್ಲಿತಂಬಿಲಗಳೂ ನಡೆಯಲಿವೆ.
ಹರಕೆ ತಂಬಿಲಗಳ ಮಧ್ಯಂತರ ವೇಳೆಗಳಲ್ಲಿ ದುರ್ಗಾ ಪೂಜೆ ಸೇವಾಕರ್ತರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಅನುಗ್ರಹಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ಅಪರಾಹ್ಣ ಎರಡರಿಂದ ಆರಂಭಗೊಂಡು ಸಂಜೆ ಐದರವರೆಗೆ ಅಡ್ಯೆತಕಂಡಕ್ಕೆ ಸಂಬಂಧಿಸಿದ ಆಶ್ಲೇಷಾ ಬಲಿ-ಬನಗಳಲ್ಲಿ ತಂಬಿಲಗಳು ನಡೆಯಲಿವೆ.
ಸಂಜೆ ಐದರಿಂದ ಎಂದಿನಂತೆ ದುರ್ಗಾ ಪೂಜೆ, ಕ್ಷೇತ್ರದ ತಂಬಿಲ ಮತ್ತು ಎರಡು ಹರಕೆ ತಂಬಿಲಗಳು ನಡೆಯಲಿವೆ ಎಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.