ತಿರುವನಂತಪುರಂ: ಕುವೈಟ್ ನಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮವಾಗುವುದನ್ನು ತಪ್ಪಿಸಲು ಕಟ್ಟಡದಿಂದ ಜಿಗಿದು ಮತ್ತೆ ನಾಲ್ವರನ್ನು ರಕ್ಷಿಸಿದ ತಿರುವಲ್ಲಾ ಮೂಲದ ಅನಿಲ್ ಕುಮಾರ್ ಎಂಬಾತ ಚೇತರಿಸಿಕೊಂಡಿದ್ದಾರೆ.
ಎರಡನೇ ಮಹಡಿಯಿಂದ ಜಿಗಿದು ಕಾಲಿಗೆ ಗಾಯ ಮಾಡಿಕೊಂಡಿರುವ ಅನಿಲ್ ಕುಮಾರ್ ಕುವೈತ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
"ಕೆಲಸಕ್ಕೆ ತೆರಳಲು ಬೇಗ ಏಳುವ ಅಭ್ಯಾಸವನ್ನು ಹೊಂದಿದ್ದು, ಪ್ರಾಥಮಿಕ ಕೆಲಸ ಮಾಡುತ್ತಿರುವಾಗ ಭಾರೀ ಶಾಖ ಮತ್ತು ಹೊಗೆ ಕಾಣಿಸಿಕೊಂಡಿತು. ದಟ್ಟವಾದ ಹೊಗೆ ಕೋಣೆಗೆ ಪ್ರವೇಶಿಸಿತು ಮತ್ತು ಉಸಿರುಗಟ್ಟಿದ ಅನುಭವವಾಯಿತು. ಅವರು ಜನರನ್ನು ಎಬ್ಬಿಸಲು ಪ್ರಯತ್ನಿಸಿದರು. ಅದು ಮುಂಜಾನೆಯಾಗಿತ್ತು. ಮತ್ತು ಅನೇಕರು ನಿದ್ರಿಸುತ್ತಿದ್ದರು, ಅವರು ಮತ್ತು ನಾಲ್ಕು ಸ್ನೇಹಿತರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಎಲ್ಲರನ್ನು ಎಬ್ಬಿಸಿ ನಾವು ನಾಲ್ವರು ಜಿಗಿದು ತಪ್ಪಿಸಿಕೊಂಡೆವು" ಎಂದಿದ್ದಾರೆ.
ಬಿದ್ದ ರಭಸಕ್ಕೆ ಅನಿಲ್ ಕುಮಾರ್ ಅವರ ಕಾಲಿಗೆ ಪೆಟ್ಟಾಗಿದೆ. ಹಿಮ್ಮಡಿ ಮತ್ತು ಪಾದಕ್ಕೆ ಗಂಭೀರ ಗಾಯವಾಗಿರುವ ಕಾರಣ ವೈದ್ಯರು ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿದ್ದಾರೆ. ಕುವೈತ್‍ನ ಮಂಗಾಫಿಲ್‍ನಲ್ಲಿ ಸಂಭವಿಸಿದ ದುರಂತದಲ್ಲಿ 23 ಕೇರಳೀಯರು ಸೇರಿದಂತೆ 50 ಜನರು ಸಾವನ್ನಪ್ಪಿದ್ದಾರೆ.