HEALTH TIPS

ಸರ್ಕಾರದ ಎಲ್ಲಾ ನಿರ್ಧಾರಗಳಲ್ಲೂ ಸರ್ವಾನುಮತ ನಮ್ಮ ಗುರಿ: ಎನ್‌ಡಿಎ ಸಭೆಯಲ್ಲಿ ಮೋದಿ

         ವದೆಹಲಿ: 'ಎನ್‌ಡಿಎ ಒಂದು ಸುವ್ಯವಸ್ಥಿತ ಒಕ್ಕೂಟವಾಗಿದ್ದು ರಾಷ್ಟ್ರ ಮೊದಲು ಎಂಬ ತತ್ವಕ್ಕೆ ಬದ್ಧವಾಗಿದೆ. ಬರಲಿರುವ ಕೇಂದ್ರ ಸರ್ಕಾರವು ತೆಗೆದುಕೊಳ್ಳಲಿರುವ ಎಲ್ಲಾ ನಿರ್ಧಾರಗಳಲ್ಲೂ ಸರ್ವಾನುಮತ ಇರುವಂತೆ ನೋಡಿಕೊಳ್ಳುವುದು ನಮ್ಮ ಗುರಿ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

            ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನಾಯಕನಾಗಿ ಆಯ್ಕೆಯಾದ ನಂತರ ಮೂರನೇ ಬಾರಿಗೆ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಪೂರ್ವದಲ್ಲಿ ಎನ್‌ಡಿಎ ಮಿತ್ರ ಪಕ್ಷಗಳನ್ನು ಉದ್ದೇಶಿಸಿ ಸಂವಿಧಾನ ಸದನದಲ್ಲಿ ಶುಕ್ರವಾರ ಮಾತನಾಡಿದರು.

            'ಎನ್‌ಡಿಎ ಸರ್ಕಾರವು ಮುಂದಿನ 10 ವರ್ಷಗಳಲ್ಲಿ ಉತ್ತಮ ಆಡಳಿತ, ಅಭಿವೃದ್ಧಿ, ಜನರ ಗುಣಮಟ್ಟ ಹೆಚ್ಚಳದತ್ತ ಗಮನ ಹಾಗೂ ಸಾಮಾನ್ಯ ಜನರ ಜೀವನದಲ್ಲಿ ಕನಿಷ್ಠ ಹಸ್ತಕ್ಷೇಪದ ಯೋಜನೆ ಹೊಂದಿದೆ' ಎಂದರು.

              'ಯಾವುದೇ ಒಕ್ಕೂಟವಾದರೂ ಅದರಲ್ಲಿ ಪರಸ್ಪರ ನಂಬಿಕೆಯೇ ಅದರ ಮೂಲಾಧಾರ. ಸರ್ವ ಪಂಗಡಗಳೂ ಸಮಾನ ಎಂಬ ತತ್ವಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಈ ಅಭೂತಪೂರ್ವ ಜಯದ ಹಿಂದೆ ಹಲವರ ಅವಿರತ ಶ್ರಮವಿದೆ. ಅವರೆಲ್ಲರಿಗೂ ಅಭಿನಂದನೆಗಳು' ಎಂದರು.

              'ಭಾರತದ ಇತಿಹಾಸದಲ್ಲೇ ಎನ್‌ಡಿಎ ಅತ್ಯಂತ ಯಶಸ್ವಿ ಒಕ್ಕೂಟವಾಗಿದೆ. ಮೂರು ಅವಧಿ ಯಶಸ್ವಿ ಸರ್ಕಾರ ನೀಡಿದ ಶ್ರೇಯ ನಮ್ಮ ಒಕ್ಕೂಟದ್ದು. ಇದೀಗ ನಾಲ್ಕನೇ ಅವಧಿಗೆ ಕಾಲಿಡುತ್ತಿದ್ದೇವೆ. ಎನ್‌ಡಿಎ ಎನ್ನುವುದು ಅಧಿಕಾರಕ್ಕಾಗಿ ಒಗ್ಗೂಡಿದ ಹಲವು ಪಕ್ಷಗಳಲ್ಲ. ಬದಲಿಗೆ ರಾಷ್ಟ್ರ ಮೊದಲು ಎಂಬ ತತ್ವಕ್ಕೆ ಬದ್ಧವಾಗಿರುವ ಒಕ್ಕೂಟ' ಎಂದು ಮೋದಿ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries