HEALTH TIPS

ಜಾಯಿಕಾಯಿ ಹಲವು ರೋಗಗಳಿಗೆ ರಾಮಬಾಣ..! ಇದರ ಉಪಯೋಗ ತಿಳಿದ್ರೆ ಶಾಕ್‌ ಆಗ್ತೀರಾ.!?

 ಸುವಾಸನೆ ಭರಿತವಾದ ಜಾಕಾಯಿಯನ್ನು ಭಾರತ, ಬರ್ಮಾ, ಮಲೇಷಿಯಾ, ಇಂಡೋನೇಷಿಯಾ ಮುಂತಾದ ದೇಶಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ . ಜಾಕಾಯಿಗೆ ಸುಗಂಧ ದ್ರವ್ಯಗಳಲ್ಲಿ ಪ್ರತ್ಯೇಕ ಸ್ಥಾನವಿದೆ. ಆಹಾರಕ್ಕೆ ರುಚಿ, ಸುವಾಸನೆ ಹೆಚ್ಚಿಸುತ್ತೆ. ವಿಶೇಷವಾದ ಪರಿಮಳ ಹಾಗೂ ಔಷಧೀಯ ಗುಣಗಳಿಂದ ಆಯುರ್ವೇದದಲ್ಲಿ ಜಾಕಾಯಿಗೆ ಮಹತ್ವದ ಸ್ಥಾನ ನೀಡಲಾಗಿದೆ.

ಪ್ರಪಂಚದಲ್ಲಿ ಎಲ್ಲಾ ಕಡೆ ಬಳಸುವ ಮಸಾಲೆ ಪದಾರ್ಥ ಇದಾಗಿದೆ.

ಜಾಕಾಯಿಯನ್ನು ಅಡಿಗೆಗೆ ಮಾತ್ರವಲ್ಲದೆ, ಆಯುರ್ವೇದ ಔಷಧೀಯವಾಗಿಯೂ, ಆರೋಗ್ಯ ರಕ್ಷಣೆಯಲ್ಲೂ ಬಳಸುತ್ತಾರೆ. ಈ ವೃಕ್ಷ ಸುಮಾರು 25 ರಿಂದ 60 ಅಡಿ ಎತ್ತರ ಬೆಳೆಯುತ್ತದೆ. ಇನ್ನು ಜಾಪತ್ರೆ ಅಥವಾ ಜಾಯಿಕಾಯಿ ಸಾಮಾನ್ಯವಾಗಿ ಆಗ್ನೇಯ ಏಶಿಯಾ ಖಂಡದಲ್ಲಿ ಬೆಳೆಯುವ ಸದಾ ಹಸಿರಾಗಿರುವ ಮರಗಳಲ್ಲೊಂದು. ಇದನ್ನು ಸಾಂಬಾರು ಪದಾರ್ಥವಾಗಿ ಬಳಸುತ್ತಾರೆ. ಇದರ ಎಣ್ಣೆ ಸುಗಂಧ ದ್ರವ್ಯಗಳನ್ನು ತಯಾರಿಸುವಲ್ಲಿ, ಔಷಧಗಳಲ್ಲಿ ಬಳಸುತ್ತಾರೆ.

  1. ಜಾಕಾಯಿ ಮಾನಸಿಕ ಒತ್ತಡವನ್ನು ತಗ್ಗಿಸುತ್ತದೆ, ಕಾಮ ವಾಂಛೆಯನ್ನು ಹೆಚ್ಚಿಸುತ್ತದೆ, ವೀರ್ಯ ಕಣಗಳ ಉತ್ಪತ್ತಿಯನ್ನು ವೃದ್ಧಿ ಮಾಡುತ್ತೆ.
  2. ಜಾಕಾಯಿ ನೀರಿನಲ್ಲಿ ಬೇಯಿಸಿ, ನೆರಳಲ್ಲಿ ಒಣಗಿಸಿ, ಚೂರ್ಣ ಮಾಡಿಟ್ಟುಕೊಂಡು, ಬೆಳಗ್ಗೆ ಮತ್ತು ಸಂಜೆ 5 ಗ್ರಾಂ ನಂತೆ 1 ಲೋಟ ಉಗುರು ಬೆಚ್ಚಗಿನ ಹಸುವಿನ ಹಾಲಿನಲ್ಲಿ ಕಲಸಿ ಕುಡಿದರೆ ಪುರುಷರಲ್ಲಿ ನಪುಂಸಕತ್ವ ದೂರವಾಗಿ ವೀರ್ಯಾಣು ವೃದ್ಧಿಸುತ್ತೆ. ದೇಹದಲ್ಲಿ ನರಗಳ ಬಲಹೀನತೆಯನ್ನು ದೂರಮಾಡುತ್ತೆ. (ಬೇಕಾದ್ರೆ 1 ಚಮಚ ಶುದ್ಧ ಜೇನುತುಪ್ಪ ಅಥವಾ ಕೆಂಪು ಕಲ್ಲು ಸಕ್ಕರೆ ಬೆರಸಿಕೊಳ್ಳಿ)
  3. ತವ್ವ ಮೇಲೆ 1 ಚಮಚ ನಾಟಿ ಹಸುವಿನ ತುಪ್ಪ ಹಾಕಿ, ಐದಾರು ಜಾಕಾಯಿ ಹಾಕಿ, ಹುರಿದುಕೊಂಡು, ಕಲಾಬತ್ತಿನಲ್ಲಿ ಹಾಕಿ ನುಣ್ಣಗೆ ಕುಟ್ಟಿ ಪುಡಿ ಮಾಡಿ, ಒಂದು ಗಾಜಿನ ಸೀಸೆಯಲ್ಲಿ ಹಾಕಿ ಭದ್ರ ಪಡಿಸಿ, 200 ml ನಾಟಿ ಹಸುವಿನ ಹಾಲಿಗೆ 1 ಚಮಚ ಚೂರ್ಣ ಹಾಕಿ, ಮಂದದ ಉರಿಯಲ್ಲಿ ಚೆನ್ನಾಗಿ ಕಾಯಿಸಿ, 100ml ಆದಾಗ ಕೆಳಗಿಳಿಸಿ, ಅದಕ್ಕೆ ಬೆಲ್ಲ 1 ಚಮಚ ಕಲಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಬಂದಲ್ಲಿ, ವೀರ್ಯಾಣು ವೃದ್ಧಿಯಾಗಿ, ಕಾಮವಾಂಛೆ ಹೆಚ್ಚಿ, ನಪುಂಸಕತ್ವ ದೂರವಾಗುತ್ತೆ.
  4. ತಾಂಬೂಲದಲ್ಲಿ ಜಾಕಾಯಿ ಸೇರಿಸಿ ಜಗಿದರೆ ಬಾಯಿ ದುರ್ವಾಸನೆ ದೂರವಾಗುತ್ತೆ. ಹಲ್ಲುಗಳ ಮೇಲಿನ ಕಲೆಗಳು ಮಾಯವಾಗುತ್ತೆ. ಅಲ್ಲದೇ ಕ್ರಿಮಿಗಳು ಸಾಯುತ್ತವೆ.
  5. ಜಾಕಾಯಿ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕಲಸಿ ಸೇವಿಸುತ್ತಿದ್ದರೆ ಹೃದಯದಲ್ಲಿನ ನೋವು ಶಮನವಾಗುತ್ತೆ.
  6. ಜಾಕಾಯಿ ಚೂರ್ಣವನ್ನು ಒಂದು ಲೋಟ ಹಾಲಿನಲ್ಲಿ 1 ಚಮಚ ಕಲಸಿ ದಿನವೂ ಕುಡಿಯುತ್ತಿದ್ದರೆ, ದೇಹದ ಚರ್ಮವು ಕಾಂತಿಯಿಂದ ಹೊಳೆಯುತ್ತೆ.
  7. ದೇಹದ ಚರ್ಮ ಸುಕ್ಕುಗಟ್ಟುವುದಿಲ್ಲ. ಅಧಿಕ ದಾಹವನ್ನು ತಣಿಸುತ್ತೆ. ಮನದಲ್ಲಿನ ಆಂದೋಲನ, ಉದ್ರೇಕವನ್ನು ತಗ್ಗಿಸಿ ಮನಸ್ಸು ಪ್ರಶಾಂತವಾಗಿರಲು ಸಹಕರಿಸುತ್ತೆ. ಚಿಟಿಕೆ ಜಾಕಾಯಿ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕಲಸಿ ಸೇವಿಸಿದರೆ ಮಾನಸಿಕ ಒತ್ತಡ ಕೆಡಿಮೆಯಾಗಿ, ಮನಸ್ಸು ಪ್ರಶಾಂತವಾಗುತ್ತದೆ.
  8. ಕೆಮ್ಮು, ಕಫ ದೂರವಾಗಿ, ಮೆದಳು ಚುರುಕಾಗಿ ಕೆಲಸ ಮಾಡಲು ಅನವುಮಾಡಿಕೊಡುತ್ತೆ. ಮೂತ್ರ ಪಿಂಡಗಳಲ್ಲಿನ ಕಲ್ಲು ಕರಗಿಸುವುದಲ್ಲದೆ, ಮೂತ್ರ ಪಿಂಡಗಳು ಸುಗುಮವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತೆ.
  9. ನಿದ್ರಾಹೀನತೆಯಿಂದ ಬಳಲುವವರು ಮಲಗುವ 15 ನಿಮಿಷ ಮುನ್ನ ಜಾಕಾಯಿ ಚೂರ್ಣ 1/2 ಚಮಚ, ಜೇನುತುಪ್ಪದಲ್ಲಿ ರಂಗಳಿಸಿ ನೆಕ್ಕಿದರೆ ನಿದ್ರೆ ಚೆನ್ನಾಗಿ ಬರುತ್ತೆ.
  10. ಕಿವಿ ನೋವಿದ್ದಾಗ ಜಾಕಾಯಿ ಗಂಧ ತೇಯ್ದು 2-3 ತೊಟ್ಟು ಕಿವಿಯಲ್ಲಿ ಹಾಕಿದ್ರೇ ನೋವು ಶಮನವಾಗುತ್ತೆ.
  11. ಮಕ್ಕಳಿಗೆ ಅತಿಸಾರ ಬೇಧಿ ಇದ್ದಾಗ ತಾಯಿ ಹಾಲಿನಲ್ಲಿ ಗಂಧ ತೇಯ್ದು ದಿನಕ್ಕೆ ಮೂರು ಬಾರಿ ನೆಕ್ಕಿಸುತ್ತಿದ್ದರೆ ಶೀಘ್ರ ಉಪಶಮನವಾಗುತ್ತೆ.
  12. ಮುಖದಮೇಲೆ ಬಂಗು ಬಂದಾಗ ಹಸುವಿನ ಹಾಲಿನಲ್ಲಿ ಜಾಕಾಯಿ ಗಂಧ ತೇಯ್ದು, ದಿನಕ್ಕೆ ಮೂರ್ನಾಲ್ಕು ಬಾರಿ ಲೇಪಿಸುತ್ತಾ, 2-3 ತಿಂಗಳು ಪಾಲಿಸಿದರೆ ಸಮಸ್ಯೆ ನಿವಾರಣೆಯಾಗುತ್ತೆ.
  13. ಜಾಕಾಯಿ 1/2 ಚಮಚ ಚೂರ್ಣವನ್ನು ಬೆಳಗ್ಗೆ ಮತ್ತು ಸಂಜೆ ಬಿಸಿನೀರಿನಲ್ಲಿ ಕಲಸಿ ಕುಡಿಯುತ್ತಿದ್ದರೆ ಹೊಟ್ಟೆನೋವು ನಿವಾರಣೆಯಾಗುತ್ತೆ.
  14. ದೇಹದ ಚರ್ಮ ಒರಟಾಗಿ ಇದ್ದವರು, ಜಾಕಾಯಿ ಎಣ್ಣೆಯಲ್ಲಿ ಮಸಾಜ್ ಮಾಡಿಕೊಂಡು 1 ಗಂಟೆಯ ನಂತರ ಸ್ನಾನ ಮಾಡಿದರೆ ಚರ್ಮವು ಮೃದುವಾಗಿ ಕಾಂತಿಯಿಂದ ಹೊಳೆಯುತ್ತೆ.
  15. ಗರ್ಭಿಣಿಯರು ಇದನ್ನು ಉಪಯೋಗಿಸಬಾರದು. ಆದರೆ, ಆಯುರ್ವೇದ ಪಂಡಿತರ ಸಲಹೆ ಪಡೆದು ಉಪಯೋಗಿಸಿ

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries