ಕಾಸರಗೋಡು: ಪೆಟ್ರೋಲಿಯಂ ಉತ್ಪನ್ನ ಸಾಗಾಟದ ಟ್ಯಾಂಕರ್ ಲಾರಿಗಳು ಚಾಲಕನೊಂದಿಗೆ ಸಹಾಯಕರನ್ನು ಹೊಂದಿರುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ. ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಟ್ಯಾಂಕರ್ ಲಾರಿಗಳನ್ನೂ ಪೆÇಲೀಸರು ತಪಾಸಣೆ ನಡೆಸಲಿದ್ದಾರೆ. ಸಹಾಯಕ ಚಾಲಕ ರಹಿತ ಪೆಟ್ರೋಲಿಯಂ ಟ್ಯಾಂಕರ್ ಲಾರಿಗಳನ್ನು ತಡೆಹಿಡಿಯಲಾಗುವುದು. ಅಗತ್ಯ ಸಮಯದಲ್ಲಿ ತ್ವರಿತ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ತಲಪ್ಪಾಡಿಯಿಂದ ಕೇರಳ ಪೆÇಲೀಸರ ಪೈಲಟ್ ವಾಹನಗಳನ್ನು ತನಿಯೋಜಿಸಲಾಗುವುದು. ತಲಪ್ಪಾಡಿ ವರೆಗೆ ಪೈಲಟ್ ವಾಹನ ಒದಗಿಸುವ ಬಗ್ಗೆ ದಕ್ಷಿಣ ಕನ್ನಡ ಉಪ ಆಯುಕ್ತರ ಸಹಕಾರ ಕೋರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. 24 ಗಂಟೆಯೂ ಕಾರ್ಯನಿರ್ವಹಿಸುವ ಅಲರ್ಟ್ ಕಂಟ್ರೋಲ್ ರೂಂ ವ್ಯವಸ್ಥೆ ಹೊಂದಿದ್ದು, ಅಗತ್ಯ ಬಿದ್ದರೆ ಅತಿ ಶೀಘ್ರದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸೌಲಭ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ವಿವಿಧ ಪೆಟ್ರೋಲ್ ಕಂಪನಿಗಳ ಪ್ರತಿನಿಧಿಗಳು ತಿಳಿಸಿದ್ದಾರೆ.
ರೋಗಗಳ ಬಗ್ಗೆ ನಿಗಾ:
ಡೆಂಘೆ, ಹಳದಿ ಕಾಮಾಲೆಯಂತಹ ರೋಗಗಳ ವಿರುದ್ಧ ನಿಗಾವಹಿಸುವುದು ಅಗತ್ಯವಾಗಿದೆ. ಜಿಲ್ಲೆಯ ಎಲ್ಲ ಹೋಟೆಲ್‍ಗಳು, ಕೂಲ್‍ಬಾರ್‍ಗಳನ್ನು ಪರಿಶೀಲಿಸಿ ಪ್ರತಿದಿನ ಡಿಡಿಎಂಎಗೆ ವರದಿ ಸಲ್ಲಿಸುವಂತೆ ಆಹಾರ ಸುರಕ್ಷತಾ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪೆಟ್ರೋಲಿಯಂ ಕಂಪನಿ ಪ್ರತಿನಿಧಿಗಳಾದ ಜೆ. ವಿಜಯ್ ಸೂರ್ಯ, ವಿ.ಸುಭಜ್ಯೋತ್ಸ್ನಾ, ಶಿವರಾಜ್ ಸಿಂಗ್, ಪಿ.ಕೆ.ಪಟ್ನಾಯಕ್, ಪಿ. ರವಿಂದು, ಎಡಿಎಂ ಕೆ.ವಿ.ಶ್ರುತಿ, ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ ಬಿ. ರಾಜಾ, ಕೆಎಸ್‍ಪಿಸಿಬಿ ಕಾರ್ಯಪಾಲಕ ಎಂಜಿನಿಯರ್ ಜೆ. ಆರ್ಥರ್ ಕ್ಸೇವಿಯರ್, ನೀರಾವರಿ ಕಾರ್ಯಪಾಲಕ ಅಭಿಯಂತರ ಡಾ.ಪಿ.ಟಿ.ಸಂತೋಷ್ ಕುಮಾರ್, ಸಹಾಯಕ ಡಿ.ಎಂ.ಒ. ಕೆ. ಪಸಾದ್ ಹಜಾರ್ಡ್, ವಿಶ್ಲೇಷಕ ಅಶ್ವತಿಕೃಷ್ಣ ಮೊದಲಾದವರು ಭಾಗವಹಿಸಿದ್ದರು.