ಕಾಸರಗೋಡು: ಹಾರ್ಬರ್ ಇಂಜಿನಿಯರಿಂಗ್ ಇಲಾಖೆಯ ಕಾಸರಗೋಡು ವಿಭಾಗೀಯ ಕಛೇರಿಯ ಅಧೀನದಲ್ಲಿರುವ ಕಾಸರಗೋಡು ಉಪ ವಿಭಾಗದ ಕಛೇರಿಗೆ ಪಿ ಎಂ ಎಂ ಎಸ್ ವೈ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ದಿನ ವೇತನದ ಆಧಾರದಲ್ಲಿ ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ.
ಅಭ್ಯರ್ಥಿಗಳು ಜುಲೈ 6 ರ ಮೊದಲು ಅರ್ಜಿ ಸಲ್ಲಿಸಬೇಕು. ಜುಲೈ 11 ರಂದು ಬೆಳಗ್ಗೆ 11ಕ್ಕೆ ಹಾರ್ಬರ್ ಇಂಜಿನಿಯರಿಂಗ್ ಇಲಾಖೆಯ ಕಾಸರಗೋಡು ವಿಭಾಗ ಕಚೇರಿಯಲ್ಲಿ ನಡೆಯಲಿರುವ ಸಂದರ್ಶನಕ್ಕೆ ಯೋಗ್ಯತೆಯನ್ನು ಸಾಬೀತುಗೊಳಿಸುವ ಅಸಲಿ ಪ್ರಮಾಣಪತ್ರಗಳೊಂದಿಗೆ ಹಾಜರಾಗಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ (04994 227258)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.