ತಿರುವನಂತಪುರಂ: ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಕಾಗೆಗಳಿಗೆ ಹಕ್ಕಿ ಜ್ವರ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಕೋಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಚೇರ್ತಲ ಮುಹಮ್ಮದ ನಾಲ್ಕನೇ ವಾರ್ಡ್‍ನಲ್ಲಿ ಸಾವನ್ನಪ್ಪಿದ ಕಾಗೆಯ ಮಾದರಿಯನ್ನು ಭೋಪಾಲ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‍ಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು.
ಇದೀಗ ಫಲಿತಾಂಶ ಲಭ್ಯವಾಗಿದ್ದು, ಹಕ್ಕಿ ಜ್ವರ ದೃಢಪಟ್ಟಿತ್ತು. ಸಾಮಾನ್ಯ ಹಕ್ಕಿ ಜ್ವರ ದೃಢಪಟ್ಟರೆ, ಕೇಂದ್ರದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಸಾಕು ಪಕ್ಷಿಗಳನ್ನು ಸಾಮೂಹಿಕವಾಗಿ ಕೊಲ್ಲುವ ಮೂಲಕ ರೋಗವನ್ನು ನಿಯಂತ್ರಣಕ್ಕೆ ತರಲಾಗುತ್ತದೆ. ಆದರೆ ಕಾಗೆಗಳಲ್ಲಿ ಇದು ಹೇಗೆ ಪ್ರಾಯೋಗಿಕವಾಗುತ್ತದೆ ಎಂಬುದು ಅಧಿಕಾರಿಗಳ ಆತಂಕ. ಕಾಗೆಗಳು ಸೇರುವ ಪ್ರದೇಶಗಳಲ್ಲಿ ರೋಗವು ವೇಗವಾಗಿ ಹರಡುವ ಸಾಧ್ಯತೆ ಕಂಡುಬಂದಿದೆ. ಇದು ಹತ್ತಿರದ ಪ್ರದೇಶಗಳಿಗೂ ಹರಡಬಹುದು. 2011-12ರ ಅವಧಿಯಲ್ಲಿ, ಒಡಿಶಾ, ಮಹಾರಾಷ್ಟ್ರ ಮತ್ತು ಜಾರ್ಖಂಡ್‍ನಲ್ಲಿ ಕಾಗೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿವೆ ಎಂದು ಪ್ರಾಣಿ ಕಲ್ಯಾಣ ಇಲಾಖೆ ತಿಳಿಸಿದೆ.