ಕಾಸರಗೋಡು: ಶಾಲಾ ಕಟ್ಟಡದಿಂದ ಬಿದ್ದು, ವಿದ್ಯಾರ್ಥಿನಿ ಗಾಯಗೊಂಡ ಘಟನೆ ಬೇಕಲದಲ್ಲಿ ನಡೆದಿದೆ. ಬೇಕಲ ಶೈಕ್ಷಣಿಕ ಉಪಜಿಲ್ಲಾ ಶಾಲೆಯೊಂದರಲ್ಲಿ ತರಗತಿ ನಡೆಯುತ್ತಿದ್ದಂತೆ, ಪ್ಲಸ್‍ಟು ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲಾ ಕಟ್ಟಡದ ಒಂದನೇ ಮಹಡಿಯಿಂದ ಬಿದ್ದಿದ್ದಾಳೆ. ತಕ್ಷಣ ಶಿಕ್ಷಕರು ಈಕೆಯನ್ನು ಕಾಞಂಗಾಡು ಜಿಲ್ಲಾಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿದ್ಯಾರ್ಥಿನಿ ಕಳೆದ ಎರಡು ದಿವಸಗಳಿಂದ ಜ್ವರದಿಂದ ಬಳಲುತ್ತಿದ್ದು, ಈಕೆಯ ಸಹಪಾಠಿಗಳು ಈಕೆಯೊಂದಿಗೆ ಮಾತನಾಡದೆ, ದೂರಮಾಡಿದ್ದರೆನ್ನಲಾಗಿದೆ. ಇದರಿಂದ ಮನನೊಂದು ಮಹಡಿಯಿಂದ ಹಾರಿರುವುದಾಗಿ ಈಕೆ ಹೆತ್ತವರಲ್ಲಿ ತಿಳಿಸಿದ್ದಾಳೆನ್ನಲಾಗಿದೆ.