ನವದೆಹಲಿ: ನಿನ್ನೆ (ಜೂ.10) ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಬಿಜೆಪಿ ನಾಯಕರು ಸೇರಿದಂತೆ ವಿದೇಶಿ ರಾಷ್ಟ್ರಗಳ ಮುಖ್ಯಸ್ಥರು, ಗಣ್ಯರು ಮತ್ತು ಸಿನಿಮಾ ತಾರೆಯರು ಸೇರಿದಂತೆ 8,000ಕ್ಕೂ ಅಧಿಕ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸ್ವೀಕರಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿತು. ಆದ್ರೆ, ಈ ವೇಳೆ ನಿಗೂಢ ರೀತಿಯಲ್ಲಿ ಪ್ರಾಣಿಯೊಂದು ಸಂಚರಿಸಿರುವುದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು, ಸದ್ಯ ದೃಶ್ಯ ಮಾತ್ರ ಭಾರೀ ವೈರಲ್ ಆಗಿದೆ. ಪ್ರಮಾಣ ವಚನ ಪ್ರಕ್ರಿಯೆ ಅಂತ್ಯಗೊಂಡ ಬಳಿಕ ಬಿಜೆಪಿ ಸಂಸದ ದುರ್ಗಾ ದಾಸ್ ಉಯ್ಕೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶುಭಾಶಯ ಕೋರುತ್ತಿದ್ದಾಗ, ಅವರ ಹಿಂದೆ ಬೆಕ್ಕಿನಂತೆ ಕಾಣುವ ಪ್ರಾಣಿಯೊಂದು ಹೋಗಿರುವುದು ಕಂಡುಬಂದಿದೆ.
https://x.com/Indian_Analyzer/status/1800005830919770130?ref_src=twsrc%5Etfw%7Ctwcamp%5Etweetembed%7Ctwterm%5E1800005830919770130%7Ctwgr%5E26a3b7e2e66ee9ae79a1afef01578969409c6f1f%7Ctwcon%5Es1_&ref_url=https%3A%2F%2Fwww.ndtv.com%2Findia-news%2Fa-leopard-video-of-animal-at-rashtrapati-bhavan-during-oath-is-viral-5857979
ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಭಾರೀ ಆಶ್ಚರ್ಯ ವ್ಯಕ್ತಪಡಿಸಿದ್ದು, ಅದು ಬೆಕ್ಕು? ಚಿರತೆ ಅಥವಾ ಶ್ವಾನವೋ? ಎಂದು ಗೊಂದಲದಿಂದ ಪ್ರಶ್ನಿಸಿದ್ದಾರೆ. ದೃಶ್ಯದಲ್ಲಿ ಕ್ಷಣಮಾತ್ರದಲ್ಲಿ ಪಾಸ್ ಆಗುವ ಪ್ರಾಣಿ ಯಾವುದು ಎಂದು ನಿಖರವಾಗಿ ಹೇಳುವುದು ಕಠಿಣವಾಗಿದೆ. ಕೆಲವರು ಇದು ಎಡಿಟರ್ ಕೈಚಳಕ ಇರಬಹುದು ಎಂದರೆ, ಇನ್ನು ಕೆಲವರು, ಏಕೆ ಯಾರು ಕೂಡ ಇದನ್ನು ಮೊದಲೇ ಗಮನಿಸಲಿಲ್ಲ. ಅಲ್ಲಿದ್ದ ಭದ್ರತಾ ಸಿಬ್ಬಂದಿಯವರ ಗಮನಕ್ಕೂ ಬಂದಿಲ್ಲ ಅಂದರೆ ಹೇಗೆ? ಎಂದು ಅಭಿಪ್ರಾಯಿಸಿದ್ದಾರೆ.