ಕಾಸರಗೋಡು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಮಟ್ಟದ'ಹಸಿರು ಹಿತ್ತಿಲು'ಯೋಜನೆಗೆ ಕಾಞಂಗಾಡಿನಲ್ಲಿ ಚಾಲನೆ ನೀಡಲಾಯಿತು. ಕಾಞಂಗಾಡು ಬ್ಲಾಕ್‍ನ ಮಡಿಕೈ ಗ್ರಾಮ ಪಂಚಾಯಿತಿಯ ವೆಣ್ಣನೂರು ದೇವಸ್ಥಾನದ ವಠಾರದಲ್ಲಿ 40 ಸೆಂಟ್ಸ್ ಜಾಗದಲ್ಲಿ ಮೊದಲ ಸಸಿ ನೆಡುವ ಮೂಲಕ ಹಸಿರು ಹಿತ್ತಿಲು ಯೋಜನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಮೊದಲ ಹಂತದಲ್ಲಿ 50ಸಸಿಗಳನ್ನು ನೆಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಪ್ರೀತಾ ಅಧ್ಯಕ್ಷತೆ ವಹಿಸಿದ್ದರು. ನವಕೇರಳ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್, ನವಕೇರಳ ಆರ್.ಪಿ.ಕೆ. ಬಾಲಚಂದ್ರನ್ ಹಾಗೂ ದೇವಸ್ಥಾನದ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಪರಿಸರ ದಿನಾಚರಣೆಯ ಪ್ರತಿಜ್ಞೆ ಸ್ವೀಕರಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರು, ವಿದ್ಯಾರ್ಥಿಗಳು, ದೇವಸ್ಥಾನ ಸಮಿತಿ ಸದಸ್ಯರು ಮೊದಲಾದವರುಪಾಲ್ಗೊಂಡಿದ್ದರು.
ಕಾಞಂಗಾಡ್ ಬ್ಲಾಕ್ ಮಟ್ಟದ ಉದ್ಘಾಟನೆ
ಉದುಮ ಗ್ರಾಮ ಪಂಚಾಯಿತಿಯ 14ನೇ ವಾರ್ಡ್‍ನ ಮಲಂಕುನ್‍ನಲ್ಲಿ 7 ಸೆಂಟ್ ಸ್ಥಳದಲ್ಲಿ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್ ಹಸಿರು ಹಿತ್ತಿಲು ಯೋಜನೆ ಉದ್ಘಾಟಿಸಿದರು. ಈ ಸಂದರ್ಭ 35 ಸಸಿಗಳನ್ನು ನೆಡಲಾಯಿತು. ಗ್ರಾಪಂ ಅಧ್ಯಕ್ಷರು, ಬ್ಲಾಕ್ ಪಂಚಾಯಿತಿ ಸದಸ್ಯರು, ಉದ್ಯೋಗ ಖಾತ್ರಿ ಯೋಜನೆ ಅಧಿಕಾರಿಗಳು, ಉದ್ಯೋಗ ಖಾತ್ರಿ ಯೋಜನೆ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪರಿಸರ ದಿನಾಚರಣೆಯ ಪ್ರತಿಜ್ಞೆ ಸ್ವೀಕರಿಸಲಾಯಿತು.