ಉಪ್ಪಳ: ಮುಳಿಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರವೇಶೋತ್ಸವ ಜರಗಿತು. ನವಾಗತರಾಗಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ಚಟುವಟಿಕೆಯ ಉದ್ಘಾಟನೆಯನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ರಹಿಮಾನ್ ಟಿ.ಎಮ್ ನೆರವೇರಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಹನೀಫಿ ಅಧ್ಯಕ್ಷತೆ ವಹಿಸಿದ್ದರು. ಒಂದನೆಯ ತರಗತಿಯಿಂದ ನಾಲ್ಕನೆ ತರಗತಿಗೆ ಹೊಸದಾಗಿ ಸೇರಿದ ಮಕ್ಕಳಿಗೆ ಪುಸ್ತಕ ಚೀಲ ಹಾಗೂ ಕಲಿಕೋಪಕರಣಗಳನ್ನು ವಿತರಿಸಲಾಯಿತು. ರಕ್ಷಕರಿಗಿರುವ ಸಬಲೀಕರಣ ತರಗತಿಯನ್ನು ಅಧ್ಯಾಪಿಕೆ ಫಝೀನ ಜಾಫರ್ ನಡೆಸಿಕೊಟ್ಟರು. ಹಿರಿಯ ಶಿಕ್ಷಕ ಇಸ್ಮಾಯಿಲ್ ಮೀಯಪದವು, ರಿಯಾಸ್ ಯಂ.ಎಸ್ ಶುಭಾಶಂಸನೆಗೈದರು. ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಯಂ ಚಿಗರುಪಾದೆ ಸ್ವಾಗತಿಸಿ, ಅಬ್ಸಾ ಟೀಚರ್ ವಂದಿಸಿದರು. ಸಭೆಯಲ್ಲಿ ಜಸೀಲ, ಧನ್ಯ, ರೇಣುಕ ಉಪಸ್ಥಿತರಿದ್ದರು.