HEALTH TIPS

ನಾಮನಿರ್ದೇಶನ: ನಿಯಮ ರದ್ದುಪಡಿಸಿದ ಸೆಬಿ

           ವದೆಹಲಿ: ನಾಮನಿರ್ದೇಶನದ ಆಯ್ಕೆಯನ್ನು ಸಲ್ಲಿಸದೆ ಇದ್ದವರ ಡಿಮ್ಯಾಟ್ ಖಾತೆಗಳನ್ನು ಹಾಗೂ ಮ್ಯೂಚುವಲ್‌ ಫಂಡ್‌ ಫೋಲಿಯೊಗಳನ್ನು ಸ್ಥಗಿತಗೊಳಿಸುವ ನಿಯಮವನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ರದ್ದುಪಡಿಸಿದೆ. ಈ ಮೂಲಕ ಅದು ಹೂಡಿಕೆದಾರರಿಗೆ ಒಂದಿಷ್ಟು ಅನುಕೂಲ ಕಲ್ಪಿಸಿದೆ.

            ಷೇರುಗಳು, ಬಾಂಡ್‌ಗಳನ್ನು ಭೌತಿಕ ಸ್ವರೂಪದಲ್ಲಿ ಹೊಂದಿರುವವರು ನಾಮನಿರ್ದೇಶನದ ಆಯ್ಕೆಯನ್ನು ಸಲ್ಲಿಸದೆ ಇದ್ದರೂ ಡಿವಿಡೆಂಡ್, ಬಡ್ಡಿಯಂತಹ ಯಾವುದೇ ಪಾವತಿಗಳನ್ನು ಸ್ವೀಕರಿಸಲು ಅರ್ಹರು ಎಂದು ಹೇಳಿದೆ.

             ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ತಮ್ಮ ಹೂಡಿಕೆಗಳಿಗೆ ನಾಮನಿರ್ದೇಶನ ಮಾಡಲು ಅಥವಾ ಯಾರನ್ನೂ ನಾಮನಿರ್ದೇಶನ ಮಾಡುತ್ತಿಲ್ಲ ಎಂದು ತಿಳಿಸಲು ಜೂನ್‌ 30 ಕಡೆಯ ದಿನ ಎಂದು ಸೆಬಿ ಈ ಮೊದಲು ಹೇಳಿತ್ತು. ಇದರಲ್ಲಿ ವಿಫಲರಾದಲ್ಲಿ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries