ಮಂಜೇಶ್ವರ: ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು. ಶಾಲಾ ಸಂಚಾಲಕ ವಂದನೀಯ ಫಾ. ಬೇಸಿಲ್ ವಾಸ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಬೇರಿಂಜ, ಎಸ್.ಎಸ್.ಜಿ. ಕನ್ವೀನರ್ ಜಯಪ್ರಕಾಶ್, ಮಾತೆಯರ ಸಂಘದ ಅಧ್ಯಕ್ಷೆ ರಾಬಿಯಾ, ಹಳೆ ವಿದ್ಯಾರ್ಥಿ, ಸಂಘದ ಕೋಶಾಧಿಕಾರಿ ಶ್ರೀಪತಿ ಸರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ.ಬೂಬ, ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾವತಿ ಉಪಸ್ಥಿತರಿದ್ದರು.