ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ಹಾಗು ಸಂಗೀತ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಯಂ ಚಿಗುರುಪಾದೆ ವಹಿಸಿದ್ದರು. ಮಂಜೇಶ್ವರ ಬಿ.ಆರ್.ಸಿ ಕ್ಷೇತ್ರ ನಿರೂಪಾಣಾಧಿಕಾರಿ ಜೋಯ್ ಉದ್ಘಾಟಿಸಿದರು. ಯೋಗದಿಂದ ನಮ್ಮಲ್ಲಿ ಉಂಟಾಗುವ ಮಾನಸಿಕ ಉಲ್ಲಾಸ ಒತ್ತಡ ನಿವಾರಣೆ ಆರೋಗ್ಯ ಮೊದಲಾದ ವಿಚಾರಗಳನ್ನು ತಿಳಿಸಲಾಯಿತು.
ಹಿರಿಯ ಶಿಕ್ಷಕ ಇಸ್ಮಾಯಿಲ್ ಮೀಯಪದವು ಶುಭಾಶಂಸನೆಗೈದರು. ಯೋಗ ತರಬೇತುದಾರೆ ಕಾವ್ಯಾಂಜಲಿ, ಅಧ್ಯಾಪಕ ಅಬ್ದುಲ್ ಬಶೀರ್ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಸಂಗೀತ ದಿನಾಚರಣೆಯ ಅಂಗವಾಗಿ ಏರೋಬ್ರಿಕ್ಸ್ ಕುಣಿತ ಹಾಗು ಅಧ್ಯಾಪಿಕೆ ಕಾವ್ಯ.ಟಿಯವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶಿಕ್ಷಕಿಯರಾದ ಫಾತಿಮತ್ ಫಝೀನ, ಧನ್ಯ ಜಸೀಲ ಸಹಕರಿಸಿದರು. ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಟೀಚರ್ ಸ್ವಾಗತಿಸಿ ಕಾವ್ಯಾಂಜಲಿ ಟೀಚರ್ ವಂದಿಸಿದರು.