ಪಿಥೌರಗಢ : ಇಲ್ಲಿಯ ಆದಿ ಕೈಲಾಸ ಮತ್ತು ಓಂ ಪರ್ವತ ಯಾತ್ರೆಯನ್ನು ಮುಂಗಾರು ಮಳೆಯ ಕಾರಣಕ್ಕಾಗಿ ಜೂನ್ 25ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಪಿಥೌರಗಢ : ಇಲ್ಲಿಯ ಆದಿ ಕೈಲಾಸ ಮತ್ತು ಓಂ ಪರ್ವತ ಯಾತ್ರೆಯನ್ನು ಮುಂಗಾರು ಮಳೆಯ ಕಾರಣಕ್ಕಾಗಿ ಜೂನ್ 25ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಈ ಯಾತ್ರೆಯು ಮೇ 13ರಿಂದ ಆರಂಭವಾಗಿತ್ತು. ಸುಮಾರು 600 ಯಾತ್ರಿಕರು ಭಾಗಿಯಾಗಿದ್ದರು.
ಎತ್ತರದ ಪ್ರದೇಶಗಳಲ್ಲಿ ಮಳೆಯಿಂದ ಯಾತ್ರಿಕರು ಪ್ರಾಯಾಸಪಡಬೇಕಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಸೆಪ್ಟೆಂಬರ್‌ನಿಂದ ಯಾತ್ರೆಯ ಬುಕಿಂಗ್ ಪುನಃ ಅರಂಭವಾಗಲಿದೆ ಎಂದು ಕುಮೋನ್ ಮಂಡಲ್ ವಿಕಾಸ ನಿಗಮದ ಅಧಿಕಾರಿ ಎಲ್.ಎಂ. ತಿವಾರಿ ಹೇಳಿದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೋಲಿಂಕಾಂಗ್‌ಗೆ ಭೇಟಿ ನೀಡಿದ್ದರು. ಅಲ್ಲಿಂದ ಈಚೆಗೆ ಈ ಯಾತ್ರೆಯು ಪ್ರಸಿದ್ಧಿಗೆ ಬಂದಿತು.