ಕಾಸರಗೋಡು: ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಬಾರಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪೊಲೀಸ್ ಕ್ಯಾಡೆಟ್(ಎಸ್‍ಪಿಸಿ)ಹಾಗೂ ಜೆಆರ್‍ಸಿ ಘಟಕಗಳ ನೇತೃತ್ವದಲ್ಲಿ ಶಾಲೆಯಲ್ಲಿ ವಿಶೇಷ ಸಭೆ ಆಯೋಜಿಸಲಾಯಿತು. ಈ ಸಂದರ್ಭ ವಿದ್ಯರ್ಥಿಘಳಿಗೆ ಮಾದಕ ದ್ರವ್ಯ ವಿರೋಧಿ ಸಂದೇಶ ನೀಡಿ ಮಾದಕ ವ್ಯಸನ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ವಿಜಯನ್, ಮುಖ್ಯ ಶಿಕ್ಷಕ ಶಂಕರನ್.ಕೆ ಹಾಗೂ ಮೇಲ್ಪರಂಬ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಅರುಣ್ ಮೋಹನ್ ಶಾಲಾ ಅಸೆಂಬ್ಲಿಯಲ್ಲಿ ಮಕ್ಕಳಿಗೆ ಮಾದಕ ವಸ್ತು ವಿರೋಧಿ ಸಂದೇಶ ನೀಡಿದರು. ನಂತರ ನಡೆದ ಸಭೆಯಲ್ಲಿ ಎಸ್.ಐ ಅರುಣ್ ಮೋಹನ್ ಮಕ್ಕಳಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ತರಗತಿ ನಡೆಸಿದರು. ಸಭೆಯಲ್ಲಿ ಸಿವಿಲ್ ಪೆÇಲೀಸ್ ಅಧಿಕಾರಿಗಳಾದ ರಾಜೇಂದ್ರನ್, ಸುಭಾಷ್, ಸಿಪಿಒ ಸತೀಶನ್, ಸುಜಿತಾ ಟೀಚರ್ ಹಾಗೂ ಸಿಬ್ಬಂದಿ ಕಾರ್ಯದರ್ಶಿ ಸೂರಜ್ ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಮಾದಕ ವಸ್ತು ವಿರೋಧಿ ರ್ಯಾಲಿ ನಡೆಯಿತು. ಈ ಸಂದರ್ಭ ಶಾಲಾ ವಠಾರದಲ್ಲಿರುವ ಅಂಗಡಿಗಳಿಗೆ ಎಸ್‍ಪಿಸಿ-ಜೆ.ಆರ್.ಸಿ ಕ್ಯಾಡೆಟ್‍ಗಳು, ಪೆÇಲೀಸ್ ಅಧಿಕಾರಿಗಳು ಹಾಗೂ ಮುಖ್ಯೋಪಾಧ್ಯಾಯರು ಭೇಟಿ ನೀಡಿ, ಮಾದಕವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಅಂಗಡಿಗಳಲ್ಲಿ ಅಮಲು ಪದಾರ್ಥಗಳನ್ನು ಮಾರಾಟ ಮಾಡದಂತೆ ಭಿತ್ತಿಪತ್ರಗಳನ್ನು ಲಗತ್ತಿಸಲಾಯಿತು.