ಕೋಝಿಕ್ಕೋಡ್: ಬಯೋವೀಪನ್ ವಿವಾದ ವೈರಲ್ ಆದ ನಂತರ, ಮೀಡಿಯಾ ಒನ್ ಲಕ್ಷದ್ವೀಪದಲ್ಲಿ ಮತ್ತೆ ಬೆಂಕಿಗೆ ತುಪ್ಪ ಸುರಿದು ದಂಗೆ ಬುಗಿಲೇಳಲು ಪ್ರಯತ್ನಿಸುತ್ತಿರುವ ಬಗ್ಗೆ ಸಾಕ್ಷ್ಯಿಗಳು ಲಭಿಸತೊಡಗಿದೆ.
ಸಾಮುದಾಯಿಕ ವಿಷವನ್ನು ಚುಚ್ಚುವ ಕ್ರಮವು ಕೇಂದ್ರಬಿಂದುವಾಗಿ ಬಹಿರಂಗವಾಗಿದ್ದು, ವಾಹಿನಿಯ ಅಡುಪ್ಪ ಕೂಟು ಎಂದು ಜನಪ್ರಿಯ ಕಾರ್ಯಕ್ರಮದ ಮೂಲಕ ವಿಷ ಬಿತ್ತನೆ ಯತ್ನ ನಡೆದಿದೆ.
ಲಕ್ಷದ್ವೀಪ ಭೌಗೋಳಿಕವಾಗಿ ಭಾರತ ಉಪಖಂಡಕ್ಕಿಂತ ಮುಸ್ಲಿಂ ರಾಷ್ಟ್ರವಾದ ಮಾಲ್ಡೀವ್ಸ್‍ಗೆ ಹತ್ತಿರದಲ್ಲಿದೆ ಎಂಬ ಅಪಾಯಕಾರಿ ಪ್ರತ್ಯೇಕತಾವಾದಿ ಅಜೆಂಡಾವನ್ನು ಮೀಡಿಯಾ ಒನ್ ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ.
ಲಕ್ಷದ್ವೀಪದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ 36,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳು ಲಕ್ಷದ್ವೀಪದ ನಿವಾಸಿಗಳ ಬದುಕನ್ನು ದುಸ್ತರಗೊಳಿಸುತ್ತವೆ ಎಂಬ ಅಭಿಯಾನವನ್ನು ಜಮಾತೆ ಇಸ್ಲಾಮಿ ಚಾನೆಲ್ ಪ್ರಾರಂಭಿಸುತ್ತಿದೆ. ಅಭಿವೃದ್ಧಿಯ ಪರಿಣಾಮಗಳ ಬಗ್ಗೆ ಲಕ್ಷದ್ವೀಪ ನಿವಾಸಿಗಳಿಗೆ ತಿಳಿದಿಲ್ಲ ಎಂದು ಮೀಡಿಯಾ ಒನ್ ಎಚ್ಚರಿಸಿದೆ.
ಪ್ರಸ್ತುತ 99.9% ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಲಕ್ಷದ್ವೀಪದಲ್ಲಿ ಅಭಿವೃದ್ಧಿಯಾದರೆ ಮುಸ್ಲಿಂ ಜನಸಂಖ್ಯೆಯ ಶೇಕಡಾವಾರು ಕಡಮೆಯಾಗುತ್ತದೆ ಎಂದು ಮೀಡಿಯಾ ಒನ್ ಆತಂಕ ವ್ಯಕ್ತಪಡಿಸಿದೆ. ಲಕ್ಷದ್ವೀಪದಲ್ಲಿ ಅಗಲವಾದ ರಸ್ತೆಗಳು ಕೂಡ ಅನಗತ್ಯ.
ಈ ಚರ್ಚೆಯಲ್ಲಿ ಮೀಡಿಯಾ ಒನ್ ವ್ಯವಸ್ಥಾಪಕ ಸಂಪಾದಕ ದಾವೂದ್ ಅವರು ಲಕ್ಷದ್ವೀಪವನ್ನು ಭಾರತೀಯ ಸೇನೆಗೆ ಅಭಯಾರಣ್ಯವನ್ನಾಗಿ ಮಾಡಿದರೆ, ದ್ವೀಪವಾಸಿಗಳಿಗೆ ಸಮಸ್ಯೆಗಳು ಎದುರಾಗುತ್ತವೆ ಮತ್ತು ದಾಳಿ ಮಾಡಿದರೆ ಅವರು ರೊಚ್ಚಿಗೇಳುವರು ಎಂದು ಬೆದರಿಕೆ ಹಾಕಿ ಮಾತನಾಡಿರುವರು.
ಇಂಡಿಯನ್ ಪ್ರಂಟ್ ನಿಯೋಗವು ಆದಷ್ಟು ಬೇಗ ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಲು ಪ್ರತಿಭಟನಾ ಕಾರ್ಯಕ್ರಮಗಳನ್ನು ಮುನ್ನಡೆಸಬೇಕೆಂದು ದಾವೂದ್ ಒತ್ತಾಯಿಸಿದರು.
ಸಿನಿಮಾ ನಟಿ ಆಯೇಷಾ ಸುಲ್ತಾನಾ ವಿರುದ್ಧ ಕೋವಿಡ್ ಅವಧಿಯಲ್ಲಿ ಕೇಂದ್ರ ಸರ್ಕಾರ ಲಕ್ಷದ್ವೀಪ ವಿರುದ್ಧ ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂಬ ಗಂಭೀರ ಆರೋಪವನ್ನು ಮೀಡಿಯಾ ಒನ್ ಎತ್ತಿತ್ತು. ಲಕ್ಷದ್ವೀಪ ಉಳಿಸಿ ಅಭಿಯಾನವು ಚಲನಚಿತ್ರ ನಿರ್ಮಾಪಕರಿಂದ ಪ್ರತಿಕ್ರಿಯೆಯನ್ನು ಪಡೆದ ನಂತರ ಸ್ವಲ್ಪ ಸಮಯದವರೆಗೆ ಈ ಅಭಿಯಾನ ನಡೆಯಿತು, ಆದರೆ ಅಂತಿಮವಾಗಿ ಅದು ಸ್ಥಗಿತಗೊಂಡಿತು.
ಲಕ್ಷದ್ವೀಪದಲ್ಲಿ ಮತ್ತೆ ಅಶಾಂತಿ ಸೃಷ್ಟಿಸಲು ಕೆಲವು ನಿಗೂಢ ಶಕ್ತಿಗಳು ಯತ್ನಿಸುತ್ತಿರುವುದು ಮೀಡಿಯಾ ಒನ್ ಚರ್ಚೆಯಿಂದ ಬಹಿರಂಗವಾಗಿದೆ.