ತ್ರಿಶೂರ್: ಕೇರಳದಲ್ಲಿ ಅಚ್ಚರಿ ಎಂಬಂತೆ ಕಮಲ ಅರಳುವ ಸೂಚನೆ ಲಭಿಸಿದ್ದು, ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಎಡರಂಗದ ಕೆಂಪು ಕೋಟೆಗಳಲ್ಲಿ ಬಹಳ ಮುನ್ನಡೆಯಲ್ಲಿದ್ದಾರೆ. ತ್ರಿಶೂರ್‍ನಲ್ಲಿ ಮತ ಎಣಿಕೆ ಎರಡು ಗಂಟೆಗಳ ಕಾಲ ಮುಗಿಯುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಕೆ.ಮುರಳೀಧರನ್ ಅವರನ್ನು ಹಿಂದಿಕ್ಕಿ ಪ್ರಥಮ ಸ್ಥಾನಕ್ಕೆ ಏರಿರುವ ಸುರೇಶ್ ಗೋಪಿ ಅವರ ವಿಜಯಯಾತ್ರೆಗೆ ಕೇರಳ ರಾಜಕೀಯ ಸಾಕ್ಷಿಯಾಗಿದೆ. ಸುರೇಶ್ ಗೋಪಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಪಿಐನ ವಿಎಸ್ ಸುನೀಲ್ ಕುಮಾರ್ ಅವರಿಗಿಂತ 50 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆಯಲ್ಲಿದ್ದಾರೆ.
ಏತನ್ಮಧ್ಯೆ, ತಿರುವನಂತಪುರಂನಲ್ಲಿ ರಾಜೀವ್ ಚಂದ್ರಶೇಖರ್ ಮತ್ತೆ ಮುನ್ನಡೆ ಸಾಧಿಸಿದ್ದಾರೆ. ರಾಜೀವ್ ಚಂದ್ರಶೇಖರ್ ಅವರು ತರೂರ್ ಅವರಿಗಿಂತ 5000ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.