ಕಣ್ಣೂರು: ಹೆಲ್ಮೆಟ್‍ಗೆ ನುಗ್ಗಿದ ಹೆಬ್ಬಾವು ಪ್ರಯಾಣಿಕನಿಗೆ ಕಚ್ಚಿದ ಘಟನೆ ನಡೆದಿದೆ. ಕಣ್ಣೂರಿನ ಇರಿಟ್ಟಿಯಲ್ಲಿ ಈ ಘಟನೆ ನಡೆದಿದೆ. ನಿಲ್ಲಿಸಿದ್ದ ಬೈಕ್ ನೊಳಗಿದ್ದ ಹೆಲೆಮೆಟ್ ಗೆ ಹೆಬ್ಬಾವು ಹತ್ತಿತು. ಹೆಲ್ಮೆಟ್ ಧರಿಸಿದ್ದ ಪತಿಯೂರು ರತೀಶ್ ಎಂಬುವವರಿಗೆ ಇದು ತಿಳಿಯದೆ ಹಾವು ಕಚ್ಚಿದೆ.
ಕಚ್ಚಿದ ನಂತರ ರತೀಶ್ ಹೆಲ್ಮೆಟ್ ತೆಗೆದು ನೋಡಿದ್ದು, ಹಾವನ್ನು ಕಂಡು ಹೆಲ್ಮೆಟ್ ಎಸೆದರು. ಇದರಿಂದಾಗಿ ಕಚ್ಚಿದ ಹಾವನ್ನು ಗುರುತಿಸಲು ಸಾಧ್ಯವಾಗಿಲ್ಲ. ರತೀಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷೆ ನಂತರ ಕಚ್ಚಿರುವುದು ಹೆಬ್ಬಾವಾಗಿದ್ದು, ವಿಷರಹಿತವಾಗಿರುವುದು ಪತ್ತೆಯಾಗಿದೆ. ರತೀಶ್ ಅರಣ್ಯ ಇಲಾಖೆಯ ಹಂಗಾಮಿ ನೌಕರ.