HEALTH TIPS

ಕೆಎಸ್‍ಆರ್‍ಟಿಸಿ ಬಸ್ ಮತ್ತು ಡಿಪೋಗಳಲ್ಲಿ ಪೋಸ್ಟರ್ ನಿಯಂತ್ರಣ: ಸಚಿವ ಗಣೇಶ್ ಕುಮಾರ್

           ತಿರುವನಂತಪುರಂ: ಕೆಎಸ್‍ಆರ್‍ಟಿಸಿ ಡಿಪೋ ಅಥವಾ ಬಸ್, ಕಚೇರಿಗಳಲ್ಲಿ ಯಾವುದೇ ಪೋಸ್ಟರ್‍ಗಳನ್ನು ಹಾಕಬಾರದು ಎಂದು ಸಚಿವ ಗಣೇಶ್ ಕುಮಾರ್ ಹೇಳಿದ್ದಾರೆ.

            ಕೆಎಸ್‍ಆರ್‍ಟಿಸಿಯ ಅಧಿಕೃತ ಯೂಟ್ಯೂಬ್ ಪೇಜ್‍ನಲ್ಲಿ ಸೂಚನೆ ಶೇರ್ ಮಾಡಿರುವ ಅವರು, ‘ನಿಮಗೆ ನಾನೇನಾದರೂ ಹೇಳಬೇಕು’ ಎಂಬ ಶೀರ್ಷಿಕೆಯ ವಿಡಿಯೋದಲ್ಲಿ ಸಚಿವರು ಈ ಸ್ಪಷಟನೆ ನೀಡಿದ್ದಾರೆ.

           ಪ್ರತ್ಯೇಕ ಮಂಡಳಿಯು ಮಾನ್ಯತೆ ಪಡೆದ ಮತ್ತು ಮಾನ್ಯತೆ ಪಡೆಯದ ಒಕ್ಕೂಟಗಳಿಗೆ ಪೋಸ್ಟರ್‍ಗಳನ್ನು ಹಾಕಲು ಅನುವು ಮಾಡಿಕೊಡುತ್ತದೆ. ಅಲ್ಲಿ ಮಾತ್ರ ಪೋಸ್ಟರ್‍ಗಳನ್ನು ಅಂಟಿಸಬೇಕು. ಈ ಬಗ್ಗೆ ಸಿಎಂಡಿ ಸೂಚನೆ ನೀಡಲಿದ್ದಾರೆ ಎಂದು ಗಣೇಶ್ ಕುಮಾರ್ ತಿಳಿಸಿದರು.

           ‘ಶನಿವಾರ ಸ್ಮಾರ್ಟ್ ಪ್ರೋಗ್ರಾಂ’ ಪ್ರಕಾರ, ಪ್ರತಿ ಶನಿವಾರ ಮಧ್ಯಾಹ್ನ 1 ಗಂಟೆಯ ಮೊದಲು, ಹಿರಿಯ ಅಧಿಕಾರಿಗಳೊಂದಿಗೆ ಕಚೇರಿಯನ್ನು ಸ್ವಚ್ಛಗೊಳಿಸಬೇಕು. ಎಲ್ಲಾ ಡಿಪೋಗಳನ್ನು ಆರು ತಿಂಗಳೊಳಗೆ ಗಣಕೀಕರಣಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಗಣೇಶ್ ಕುಮಾರ್ ಅವರು ಸಚಿವಾಲಯದ ನೌಕರರೊಂದಿಗೆ ಹಂಚಿಕೊಂಡ ವೀಡಿಯೊದಲ್ಲಿ ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries