ಬಾಳೆಕಾಯಿ ಅನೇಕ ಆರೋಗ್ಯ ಪ್ರಯೋಜನಗಳಿಂದ ಆವೃತವಾದ ಉತ್ತಮ ತರಕಾರಿಯೂ ಹೌದು. ಪೊಟ್ಯಾಸಿಯಂನ ಉಗ್ರಾಣ ಎನ್ನಲಾಗುತ್ತದೆ. ಮಾತ್ರವಲ್ಲ, ಖನಿಜಗಳೂ ಸಮೃದ್ಧವಾಗಿವೆ.
ಇದು ಯಾವ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ನೋಡೋಣ.
ಬಾಳೆಕಾಯಿ ದೇಹ ಮತ್ತು ರಕ್ತದಲ್ಲಿನ ತ್ಯಾಜ್ಯವನ್ನು ತೊಡೆದುದುಹಾಕಲು ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಬಾಳೆಕಾಯಿ ತೂಕ ನಷ್ಟ ಮತ್ತು ಹೃದಯ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಮತ್ತು ಖನಿಜಾಂಶಗಳು ಹೃದಯದ ಆರೋಗ್ಯವನ್ನೂ ಕಾಪಾಡುತ್ತವೆ.
ಇದರಲ್ಲಿರುವ ಮೆಗ್ನೀಶಿಯಮ್ ಮೂಳೆಗಳು ಮತ್ತು ಹಲ್ಲುಗಳಿಗೆ ಶಕ್ತಿ ಮತ್ತು ಸ್ಥಿರತೆಯನ್ನು ಒದಗಿಸುವಲ್ಲಿ ಮುಖ್ಯವಾಗಿದೆ. ಸ್ನಾಯುಗಳ ಆರೋಗ್ಯವನ್ನು ಸುಧಾರಿಸಲು ಮತ್ತು ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಬಾಳೆಕಾಯಿ ಸಹಾಯ ಮಾಡುತ್ತದೆ.
ಬಳಸುವುದು ಹೇಗೆ:
ಐದು ಬಾಳೆಕಾಯಿಗಳನ್ನು ಆಯ್ದು ತೊಳೆದು ಸ್ವಚ್ಛಗೊಳಿಸಿ ಮತ್ತು ಕುಕ್ಕರ್‍ನಲ್ಲಿ 10 ನಿಮಿಷ ಬೇಯಿಸಿ. 10 ನಿಮಿಷಗಳ ಕಾಲ ಬೇಯಿಸಿದ ನಂತರ, ಅದರ ಸಿಪ್ಪೆಗಳನ್ನು ತೆಗೆಯಬೇಕು. ನಂತರ ಅದಕ್ಕೆ ಸ್ವಲ್ಪ ಐಸ್ ಕ್ಯೂಬ್ ಗಳನ್ನು ಸೇರಿಸಿ. ಬೇಯಿಸಿದ ಬಾಳೆಕಾಯಿಗೆ ಸ್ವಲ್ಪ ನೀರು ಸೇರಿಸಿ ಮತ್ತು ಫ್ರೀಜರ್‍ನಲ್ಲಿ ಐಸ್ ಕ್ಯೂಬ್‍ಗಳಾಗಿ ಪರಿವರ್ತಿಸಿ.
ನಿಮ್ಮ ಮೆಚ್ಚಿನ ಜ್ಯೂಸ್‍ಗೆ ಈ ಐಸ್ ಕ್ಯೂಬ್‍ಗಳನ್ನು ಸೇರಿಸಿ. ಒಂದು ವಾರ ನಿಯಮಿತವಾಗಿ ಸೇವಿಸಿದರೆ, ಮಧುಮೇಹವನ್ನು ಕಡಮೆ ಸಮಯದಲ್ಲಿ ಬೇರು ಸಹಿತ ನಿರ್ಮೂಲನೆ ಮಾಡಬಹುದು.