HEALTH TIPS

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಐಶ್ವರ್ಯಾ. ಎಸ್. ಮೆನನ್ ಗೆ ಆಹ್ವಾನ: ಅಂಗಮಾಲಿ ಮೂಲದ ವಂದೇ ಭಾರತ್ ಲೋಕೋ ಪೈಲಟ್

              ನವದೆಹಲಿ: ಭಾನುವಾರ ನಡೆಯಲಿರುವ ಮೂರನೇ ನರೇಂದ್ರ ಮೋದಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವಂದೇಭಾರತದ ಲೋಕೋ ಪೈಲಟ್ ಐಶ್ವರ್ಯಾ ಎಸ್ ಮೆನನ್ ಅವರನ್ನು ಆಹ್ವಾನಿಸಲಾಗಿದೆ.

            ಅಂಗಮಾಲಿ ಮೂಲದ ಐಶ್ವರ್ಯಾ ಅವರು ಚೆನ್ನೈ-ಈರೋಡ್ ಮತ್ತು ಚೆನ್ನೈ-ರೇನಿಗುಡ ಮಾರ್ಗಗಳಲ್ಲಿ ವಂದೇ ಭಾರತ್ ನ ಲೋಕೋ ಪೈಲಟ್ ಆಗಿದ್ದಾರೆ. ವಂದೇ ಭಾರತ್ ನಡೆಸುತ್ತಿರುವ ಹತ್ತು ಲೋಕೋ ಪೈಲಟ್‍ಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಐಶ್ವರ್ಯಾ ದಕ್ಷಿಣ ರೈಲ್ವೆಯನ್ನು ಪ್ರತಿನಿಧಿಸಲಿದ್ದಾರೆ. 

           ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಅವರನ್ನೂ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಸುರೇಖಾ ವಂದೇಭಾರತ್ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್-ಸೋಲಾಪುರ ಮಾರ್ಗದ ಲೋಕೋ ಪೈಲಟ್. ಅವರು 1988 ರಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡಿದ್ದರು. ಸೆಮಿ-ಹೈ ಸ್ಪೀಡ್ ಟ್ರಯಲ್ ಅನ್ನು ಚಲಾಯಿಸಿದ ಏಷ್ಯಾದ ಮೊದಲ ಮಹಿಳೆ ಎಂಬ ದಾಖಲೆಯನ್ನು ಹೊಂದಿದ್ದಾರೆ.

            ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ ಕೆಲಸ ಮಾಡಿದ ನೈರ್ಮಲ್ಯ ಕಾರ್ಯಕರ್ತರು, ಟ್ರಾನ್ಸ್‍ಜೆಂಡರ್‍ಗಳು ಮತ್ತು ಕಾರ್ಮಿಕರು ಕೂಡ ರಾಷ್ಟ್ರಪತಿ ಭವನದಲ್ಲಿ ನಡೆಯುವ ಪ್ರಮಾಣ ವಚನ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಒಟ್ಟು 8,000 ಅತಿಥಿಗಳು ಭಾಗವಹಿಸುತ್ತಾರೆ. ಕಾರ್ಯಕ್ರಮಕ್ಕೆ ದಕ್ಷಿಣ ಏಷ್ಯಾದ ನಾಯಕರಿಗೂ ಆಹ್ವಾನ ನೀಡಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries