ಮುಳ್ಳೇರಿಯ: ಬೇಸಿಗೆ ರಜಾ ಕಾಲದ ಸವಿಗಳನ್ನು ಬರವಣಿಗೆ ರೂಪಕ್ಕಿಳಿಸಿರುವುದು ಒಳ್ಳೆಯ ವಿಚಾರವಾಗಿದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಸಂಪೂರ್ಣವಾಗಿ ವಿದ್ಯಾರ್ಥಿಗಳೇ ಶ್ರಮವಹಿಸಿ ಈ ಡಿಜಿಟಲ್ ಪುಸ್ತಕವನ್ನು ಹೊರ ತಂದಿರುವುದು ಶ್ಲಾಘನೀಯ ಎಂದು ಕಾರಡ್ಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಆಧ್ಯಾಪಿಕೆ ಅಂಬಿಕಾ ಟೀಚರ್ ಅವರು ಹೇಳಿದರು.
ಶಾಲೆಯ ಕನ್ನಡ ಮಾಧ್ಯಮದ 9ನೇ ತರಗತಿಯ ವಿದ್ಯಾರ್ಥಿಗಳೇ ಹೊರತಂದಿರುವ ‘ರಜಾ ಮಜಾ’ ಡಿಜಿಟಲ್ ರೂಪದ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಕಥೆ, ಕವಿತೆ, ಓದಿನ ಟಿಪ್ಪಣಿ, ಪ್ರವಾಸ ಕಥನ, ಪ್ರಬಂಧ, ನಾಟಕ ಮೊದಲಾದವುಗಳನ್ನು ಈ ಕೃತಿಯು ಒಳಗೊಂಡಿದೆ.
8ನೇ ತರಗತಿಯ ದೇವಿಕಾ ಅವರು ಓದಿನ ಮಹತ್ವದ ಬಗ್ಗೆ ಭಾಷಣ ಮಾಡಿದರು. ಸಹಶಿಕ್ಷಕರಾದ ಡಾ. ಶ್ರೀಶ ಕುಮಾರ, ರತೀಶ, ಚೈತ್ರಾ, ಚೈತ್ರಾ ನಾಯಕ್, ಅಖಿಲಾ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮಂಜುಳಾ ಸ್ವಾಗತಿಸಿ, ಭೂಮಿಕಾ ಸಲ್ಲಿಸಿದರು. ಸಹನಾ ನಿರೂಪಿಸಿದರು. ವಾಚನ ವಾರಚರಣೆಯ ವಿಶೇಷ ಕಾರ್ಯಕ್ರಮವಾಗಿ ಇದು ಮೂಡಿಬಂತು.