ಕುಂಬಳೆ: ಚಿರಂಜೀವಿ ಕುಂಬಳೆ ಇದರ ಆಶ್ರಯದಲ್ಲಿ ಪರಿಸರ ದಿನಾಚರಣೆ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಪುಸ್ತಕ ವಿತರಣೆ, ಎಸ್‍ಎಸ್‍ಎಲ್‍ಸಿ, ಪ್ಲಸ್ ಟು ಗಳಲ್ಲಿ ಉನ್ನತ ಅಂಕ ಪಡೆದವರಿಗೆ ಅಭಿನಂದನೆ ಕಾರ್ಯಕ್ರಮ ಜರಗಿತು.
ಮಂಜೇಶ್ವರ ತಾಲೂಕು ಗ್ರಂಥಾಲಯ ಕಾರ್ಯದರ್ಶಿ ಕಮಲಾಕ್ಷ ಉದ್ಘಾಟಿಸಿದರು. ಕೃಷ್ಣ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ಉನ್ನತ ಅಂಕ ಗಳಿಸಿದ ವೈಷ್ಣವಿ ಕಾರ್ಳೆ, ವಾಸ್ತವಿ ಕಾರ್ಳೆ, ಮಹೇಶ್ ಭಾಸ್ಕರ್‍ಗೆ ಅಭಿನಂದನೆ ನಡೆಯಿತು. 35 ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.
ತಾಲೂಕು ಗ್ರಂಥಾಲಯ ಕೌನ್ಸಿಲರ್ ಗಿರಿಜಾ ತಾರಾನಾಥ, ಇಎಂಎಸ್ ಗ್ರಂಥಾಲಯ ಕಾರ್ಯದರ್ಶಿ ಚಂದ್ರಶೇಖರ ಕುಂಬಳೆ, ಗ್ರಂಥಾಲಯ ಪಾಲಕಿ ಪೂರ್ಣಿಮಾ ಗಟ್ಟಿ, ಚಿರಂಜೀವಿ ಅಧ್ಯಕ್ಷ ಕೃಷ್ಣ ಕುಂಬಳೆ, ಕಾರ್ಯದರ್ಶಿ ನವೀನ್ ಗಟ್ಟಿ ಮುಂಗಿಲ, ಕೋಶಾಧಿಕಾರಿ ಎಂ.ಗೋಪಿ, ಕೆ.ಸಿ.ಮೋಹನ್. ಸಂತೋಷ್ ಕೆ. ಗೀತಾ, ಸಂಧ್ಯಾ, ಶಿಲ್ಪಾ ಉಪಸ್ಥಿತರಿದ್ದರು .ಕೆ.ಸಿ.ಮೋಹನ್, ಸಂತೋಷ್ ಕೆ, ಗಿರಿಜಾ ತಾರಾನಾಥ್, ಕೃಷ್ಣ ಕುಂಬಳೆ ಪರಿಸರ ದಿನಾಚರಣೆಯ ಬಗ್ಗೆ ಮಾತನಾಡಿದರು. ಗ್ರಂಥಾಲಯ ಕಾರ್ಯದರ್ಶಿ ಚಂದ್ರಶೇಖರ ಸ್ವಾಗತಿಸಿ, ಗೀತಾ ವಂದಿಸಿದರು.