HEALTH TIPS

ಎಂ.ಜಿ.ವಿ.ವಿ.ಯ ಮಾಜಿ ವಿ.ಸಿ. ಪ್ರೊ.ಸಾಬು ಥಾಮಸ್ ರಿಗೆ ಗೋಲ್ಡನ್ ಔಲ್ ಪ್ರಶಸ್ತಿ

                ಕೊಟ್ಟಾಯಂ: ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯದ ನ್ಯಾನೊಸೈನ್ಸ್ ಮತ್ತು ನ್ಯಾನೊಟೆಕ್ನಾಲಜಿ ಸ್ಕೂಲ್‍ನ ಮಾಜಿ ಉಪಕುಲಪತಿ ಮತ್ತು ನಿರ್ದೇಶಕ ಪ್ರೊ.ಸಾಬು ಥಾಮಸ್ ಅವರಿಗೆ ವಲ್ರ್ಡ್ ಅಕಾಡೆಮಿ ಆಫ್ ಮೆಟೀರಿಯಲ್ಸ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಎಂಜಿನಿಯರಿಂಗ್‍ನಿಂದ ಪ್ರೆಡ್ರಿಕ್ ಸ್ಟೌಬ್ ಗೋಲ್ಡನ್ ಔಲ್ ಪ್ರಶಸ್ತಿ ಒದಗಿಬಂದಿದೆ. 

               ಪೋಲೆಂಡ್ ಮೂಲದ ಅಕಾಡೆಮಿಯ ಮನ್ನಣೆಯು ಮೆಟೀರಿಯಲ್ ಸೈನ್ಸ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಎಂಜಿನಿಯರಿಂಗ್‍ಗೆ ಅವರ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಿದೆ. ಪೋಲಿಷ್ ಸಂಶೋಧಕರು ಮತ್ತು ಅಂತರಾಷ್ಟ್ರೀಯ ವೈಜ್ಞಾನಿಕ ಸಮುದಾಯದ ನಡುವಿನ ಸಹಕಾರವನ್ನು ಬಲಪಡಿಸುವಲ್ಲಿ ಪ್ರೊ. ಸಾಬು ಥಾಮಸ್ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯು ನಿರ್ಣಯಿಸಿದೆ. ಪೋಲೆಂಡ್ ನ ವಿಸ್ವಾದಲ್ಲಿ ನಡೆದ ಸಮಾರಂಭದಲ್ಲಿ ಪ್ರೊ.ಸಾಬು ಥಾಮಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries