ಕಲ್ಪೆಟ್ಟ: ರಾಹುಲ್ ಗಾಂಧಿ ವಯನಾಡು ಲೋಕಸಭಾ ಕ್ಷೇತ್ರವನ್ನು ತೊರೆಯುತ್ತಿರುವುದನ್ನು ಕೆಪಿಸಿಸಿ ಖಚಿತಪಡಿಸಿದೆ. ಅಧ್ಯಕ್ಷ ಕೆ ಸುಧಾಕರನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಭಾರತವನ್ನು ಮುನ್ನಡೆಸಬೇಕಾದ ರಾಹುಲ್ ವಯನಾಡಿಗೆ ಬಂದು ಉಳಿಯಲು ಸಾಧ್ಯವಿಲ್ಲ ಎಂದು ಕೆ ಸುಧಾಕರನ್ ಹೇಳಿದ್ದಾರೆ.
ರಾಯ್ ಬರೇಲಿ ಲೋಕಸಭಾ ಕ್ಷೇತ್ರ ಮತ್ತು ವಯನಾಡು ಲೋಕಸಭಾ ಕ್ಷೇತ್ರಗಳೆರಡರಲ್ಲೂ ಜಯಗಳಿಸಿರುವ ರಾಹುಲ್ ಗಾಂಧಿ ಆಬಳಿಕ ಯಾವ ಕ್ಷೇತ್ರವನ್ನು ಬಿಡುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಇದೀಗ ಖುದ್ದು ಕೆಪಿಸಿಸಿ ಅಧ್ಯಕ್ಷರೇ ಈ ಬಗ್ಗೆ ದೃಢೀಕರಣ ನೀಡಿದ್ದಾರೆ.
ನಾವು ದುಃಖಿತರಾಗಿದ್ದರೂ ಪರವಾಗಿಲ್ಲ. ಭಾರತವನ್ನು ಮುನ್ನಡೆಸಬೇಕಾದ ರಾಹುಲ್ ಗಾಂಧಿ ವಯನಾಡಿನಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಕೆ ಸುಧಾಕರನ್ ಹೇಳಿದರು.