HEALTH TIPS

ಬಿಹಾರ: ಜೆಡಿಯು ಕಾರ್ಯಕಾರಿ ಅಧ್ಯಕ್ಷರಾಗಿ ಸಂಜಯ್‌ ಝಾ ನೇಮಕ

           ವದೆಹಲಿ: ರಾಜ್ಯಸಭೆ ಸದಸ್ಯ ಸಂಜಯ್‌ ಝಾ ಅವರನ್ನು ಪಕ್ಷದ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಜೆಡಿಯು ಶನಿವಾರ ನೇಮಿಸಿದೆ.

            ದೆಹಲಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಬಿಜೆಪಿ ನಾಯಕರ ಜೊತೆ ಸಂಜಯ್‌ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಅಲ್ಲದೇ ಅವರು ರಾಜ್ಯಸಭೆಯಲ್ಲಿ ಜೆಡಿಯು ನಾಯಕರಾಗಿದ್ದಾರೆ. ಈ ನಿಟ್ಟಿನಲ್ಲಿ ಅವರ ಆಯ್ಕೆಯು ಮಹತ್ವ ಪಡೆದಿದೆ.

                ಬಿಹಾರಕ್ಕೆ ವಿಶೇಷ ವರ್ಗ ಸ್ಥಾನಮಾನ ನೀಡುವ ತನ್ನ ಒತ್ತಾಯವನ್ನು ಸಭೆಯಲ್ಲಿ ಪಕ್ಷವು ಪುನರುಚ್ಚರಿಸಿತು. ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿ ಮಾಡುವಂತೆ ಕೇಂದ್ರ ಸರ್ಕಾರವನ್ನು ಈ ವೇಳೆ ಒತ್ತಾಯಿಸಿತು.

                 ಬಿಹಾರ ಮುಖ್ಯಮಂತ್ರಿ, ಜೆಡಿಯು ಅಧ್ಯಕ್ಷ ನಿತೀಶ್‌ ಕುಮಾರ್‌, ಕೇಂದ್ರ ಸಚಿವರಾದ ಲಲನ್‌ ಸಿಂಗ್‌, ರಾಮ್‌ನಾಥ್‌ ಠಾಕೂರ್‌ ಮತ್ತು ಪಕ್ಷದ ಇತರ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries