ಮಾಸ್ಕೊ: ಉಕ್ರೇನ್ ನಡೆಸಿದ ಡ್ರೋನ್ ದಾಳಿಗೆ ರಷ್ಯಾದ ಗಡಿ ಪ್ರದೇಶದ ಮನೆಯೊಂದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿರುವುದಾಗಿ ಪ್ರಾದೇಶಿಕ ಗವರ್ನರ್ ಶನಿವಾರ ತಿಳಿಸಿದ್ದಾರೆ.
ಮಾಸ್ಕೊ: ಉಕ್ರೇನ್ ನಡೆಸಿದ ಡ್ರೋನ್ ದಾಳಿಗೆ ರಷ್ಯಾದ ಗಡಿ ಪ್ರದೇಶದ ಮನೆಯೊಂದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿರುವುದಾಗಿ ಪ್ರಾದೇಶಿಕ ಗವರ್ನರ್ ಶನಿವಾರ ತಿಳಿಸಿದ್ದಾರೆ.
ಉಕ್ರೇನ್ ಗಡಿ ಸಮೀಪವಿರುವ ರಷ್ಯಾದ ಕುರ್ಸೆಕ್ ಪ್ರದೇಶದ ಗೊರೊಡಿಶ್ ಗ್ರಾಮದ ಮನೆಯೊಂದರ ಮೇಲೆ ಡ್ರೋನ್ ಅಪ್ಪಳಿಸಿದೆ.
'ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿದ್ದು, ಕುಟುಂಬದ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 'ಕಾಪ್ಟರ್' ಮಾದರಿಯ ಡ್ರೋನ್ ಬಳಸಿ ದಾಳಿ ನಡೆಸಲಾಗಿದೆ' ಎಂದು ಕುರ್ಸೆಕ್ ಗವರ್ನರ್ ಅಲೆಕ್ಸಿ ಸ್ಮಿರ್ನೋವ್ ತಿಳಿಸಿದ್ದಾರೆ.
ಉಕ್ರೇನ್ ಈ ವರ್ಷ ರಷ್ಯಾದ ಭೂಪ್ರದೇಶದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ರಷ್ಯಾ ಸೇನೆಗೆ ಇಂಧನವನ್ನು ಪೂರೈಸುವ ತೈಲ ಘಟಕಗಳು ಮತ್ತು ಗಡಿ ಸಮೀಪದ ನಗರ ಹಾಗೂ ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದೆ.