HEALTH TIPS

ಯುಪಿ ಶಾಲೆ ಬಳಿ ಠಳಾಯಿಸಿದ ಕಾಡಾನೆಗಳ ಹಿಂಡು: ಪತ್ತನಂತಿಟ್ಟದಲ್ಲಿ ಘಟನೆ

               ಪತ್ತನಂತಿಟ್ಟ: ಕಲ್ಲೇಲಿ ಜನವಸತಿ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡು ಆತಂಕ ಮೂಡಿಸಿತು. ಕಲ್ಲೇಲಿ ಯು.ಪಿ.ಶಾಲೆ ಬಳಿ ಕಾಡಾನೆಗಳ ಹಿಂಡು ವಸತಿ ಪ್ರದೇಶಗಳ ಸನಿಹ ಠಳಾಯಿಸಿ ಆತಂಕ ಸೃಷ್ಟಿಸಿವೆ. ಇಂದು ಮುಂಜಾನೆ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಬಂದಿವೆ.

              ಕೆಲಸ ನಿಮಿತ್ತ ಹೊರ ಬಂದ ತೋಟದ ಕಾರ್ಮಿಕರಿಗೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ಆದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಕಾಡಾನೆಗಳ ಹಿಂಡು ಖಾಸಗಿ ವ್ಯಕ್ತಿಯೊಬ್ಬರ ಎಸ್ಟೇಟ್ ನಲ್ಲಿ ಬೀಡು ಬಿಟ್ಟಿದ್ದು, ಇವುಗಳನ್ನು ಹೊರದಬ್ಬಲು ಕೆಲವು ವಿಧಾನಗಳನ್ನು ಅನುಸರಿಸಬೇಕಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹಗಲು ವೇಳೆಯೂ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದು, ನಿತ್ಯ ಶಾಲಾ ಮಕ್ಕಳು ಹೋಗುವ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ ಎನ್ನುತ್ತಾರೆ ಸ್ಥಳೀಯರು.

              ಕಳೆದ ತಿಂಗಳುಗಳಲ್ಲಿಯೂ ಕಾಡಾನೆಗಳು ಗುಂಪು ಗುಂಪಾಗಿ ಬಂದು ಭಯಭೀತಿ ಸೃಷ್ಟಿಸಿದ್ದವು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries