HEALTH TIPS

ಮಹಾಸಾಗರ ತಳದಲ್ಲಿ ಕೋಬಾಲ್ಟ್ ನಿಕ್ಷೇಪ; ಮೈನಿಂಗ್​ಗೆ ಅನುಮತಿ ಕೋರಿದ ಭಾರತ; ಅತ್ತ ಶ್ರೀಲಂಕಾದಿಂದಲೂ ಪೈಪೋಟಿ

 ಭಾರತ, ಮಾಲ್ಡೀವ್ಸ್ ಮತ್ತು ಶ್ರೀಲಂಕಾ ಕರಾವಳಿ ಸಮೀಪ ಇರುವ ಅಫಾನಾಸಿ ನಿಕಿಟಿನ್ ಸೀಮೌಂಟ್ ಎಂಬ ಸಾಗರ ತಳದ ಬೆಟ್ಟದಲ್ಲಿ ಕೋಬಾಲ್ಟ್ ನಿಕ್ಷೇಪ ಇದೆ. ಈ ಬೆಟ್ಟವನ್ನು ಅಧ್ಯಯನ ಮಾಡಲು ಅನುಮತಿ ಕೋರಿ ಜಮೈಕಾದಲ್ಲಿರುವ ಇಂಟರ್​ನ್ಯಾಷನಲ್ ಸೀಬೆಡ್ ಅಥಾರಿಟಿ ಬಳಿ ಭಾರತ ಅರ್ಜಿ ಹಾಕಿದೆ.

ಈ ಸೀಮೌಂಟ್ ಭಾರತದಿಂದ 1,350 ಕಿಮೀ ದೂರದಲ್ಲಿದ್ದರೆ, ಶ್ರೀಲಂಕಾದಿಂದ 1,050 ದೂರದಲ್ಲಿದೆ.

ನವದೆಹಲಿ, ಜೂನ್ 20: ಹಿಂದೂ ಮಹಾಸಾಗರದ ಒಳಗಿರುವ ಕೋಬಾಲ್ಟ್ ಲೋಹಯುಕ್ತ ಗುಡ್ಡದ ಮೈನಿಂಗ್ ನಡೆಸಲು ಅನುಮತಿಗಾಗಿ ಭಾರತ ಅತೀವ ಪ್ರಯತ್ನ ನಡೆಸುತ್ತಿದೆ. ಅಫಾನಾಸಿ ನಿಕಿಟಿನ್ ಸೀಮೌಂಟ್ (Afanasy Nikitin Seamount) ಎಂದು ಕರೆಯಲಾಗುವ ಈ ಸಾಗರ ತಳದ ಕೋಬಾಲ್ಟ್ ನಿಕ್ಷೇಪವು (cobalt blocks) ಭಾರತದ ದಕ್ಷಿಣ ಕರಾವಳಿ ತುದಿಯಿಂದ 1,350 ಕಿಮೀ ದೂರದಲ್ಲಿದೆ. ಜಾಗತಿಕವಾಗಿ ಸಾಗರರ ಮಧ್ಯೆ ನಡೆಯುವ ಆರ್ಥಿಕ ಚಟುವಟಿಕೆಗಳ ಕಾನೂನು ನಿಯಂತ್ರಣ ಪ್ರಾಧಿಕಾರ ಎನಿಸಿರುವ ಇಂಟರ್ನ್ಯಾಷನಲ್ ಸೀಬೆಡ್ ಅಥಾರಿಟಿ (International seabed Authority) ಬಳಿಕ ಅನುಮತಿಗಾಗಿ ಭಾರತ ಅರ್ಜಿ ಸಲ್ಲಿಸಿದೆ. ಐದು ಲಕ್ಷ ಡಾಲರ್ ಶುಲ್ಕವನ್ನೂ ಕಟ್ಟಿರುವ ಭಾರತ, ಆ ಜಾಗದಲ್ಲಿ 15 ವರ್ಷ ಕಾಲ ಭೌಗೋಳಿಕ, ಪರಿಸರ ಅಧ್ಯಯನ ನಡೆಸಲು ಅನುಮತಿಸುವಂತೆ ಮನವಿ ಮಾಡಿದೆ.

ಕೋಬಾಲ್ಟ್ ಬಹಳ ಅಮೂಲ್ಯ ಲೋಹ…

ಈ ಭೂಮಿಯಲ್ಲಿ ಸಿಗುವ ಅತ್ಯಂತ ವಿರಳ ಖನಿಜಗಳಲ್ಲಿ ಕೋಬಾಲ್ಟ್ ಒಂದು. ಎಲೆಕ್ಟ್ರಿಕ್ ವಾಹನ ಮತ್ತು ಬ್ಯಾಟರಿಗಳಿಗೆ ಇದು ಬಹಳ ಮುಖ್ಯ. ಹೀಗಾಗಿ, ಕೋಬಾಲ್ಟ್​ಗೆ ಬಹಳಷ್ಟು ಬೇಡಿಕೆ ಇದೆ. ಭಾರತದಲ್ಲಿ ನಾಲ್ಕೈದು ಜಾಗದಲ್ಲಿ ಕೋಬಾಲ್ಟ್ ಇರುವಿಕೆಯನ್ನು ಗುರುತಿಸಲಾಗಿದೆ. ಇದರ ಮೈನಿಂಗ್ ಕಾರ್ಯ ಭಾರತಕ್ಕೆ ಹೊಸತು. ಬೇರೆ ಬೇ ದೇಶಗಳಲ್ಲಿ ಇರುವ ಕೋಬಾಲ್ಟ್ ನಿಕ್ಷೇಪದ ಮೈನಿಂಗ್ ಪಡೆಯಲೂ ಭಾರತ ಪ್ರಯತ್ನಿಸುತ್ತಿದೆ.

ವಿಶ್ವದ ಅತಿವಿರಳ ಖನಿಜಗಳ ವಿಚಾರಕ್ಕೆ ಬಂದರೆ ಚೀನಾದ ಪ್ರಾಬಲ್ಯ ಬಹಳ ಇದೆ. ವಿಶ್ವದ ಶೇ. 70ರಷ್ಟು ಕೋಬಾಲ್ಟ್ ಅನ್ನು ಚೀನಾ ದೇಶವೇ ತಯಾರಿಸುತ್ತದೆ. ಹಲವು ಪ್ರಮುಖ ಖನಿಜಗಳ ಸರಬರಾಜು ಚೀನಾ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹೀಗಾಗಿ, ಭಾರತಕ್ಕೆ ಕೋಬಾಲ್ಟ್ ಇತ್ಯಾದಿ ಖನಿಜಗಳು ಸಿಕ್ಕಷ್ಟೂ ಬೇಕು.

ಸಾಗರ ತಳದಲ್ಲಿ ಮೈನಿಂಗ್ ನಡೆಸುವ ಕಾರ್ಯವೂ ಭಾರತಕ್ಕೆ ಹೊಸತು. ಭಾರತಕ್ಕೆ ಸಮೀಪವೇ ಸಾಗರತಳದಲ್ಲಿ ಕೋಬಾಲ್ಟ್ ನಿಕ್ಷೇಪ ಇದ್ದರೂ ಅದನ್ನು ಪಡೆಯುವುದು ಅಷ್ಟು ಸುಲಭವಾಗಿಲ್ಲ. ಈ ಸ್ಥಳವು ಮಾಲ್ಡೀವ್ಸ್ ಮತ್ತು ಶ್ರೀಲಂಕಾಗೂ ಸಮೀಪವೇ ಇದೆ. ಅಫಾನಾಸಿ ನಿಕಿಟಿನ್ ಸೀಮೌಂಟ್ ಎಂದು ಕರೆಯಲಾಗುವ ಈ ಸಾಗರತಳದ ಗುಡ್ಡವು ಭಾರತದಿಂದ 1,350 ಕಿಮೀ ದೂರದಲ್ಲಿದೆ. ಮಾಲ್ಡೀವ್ಸ್​ನಿಂದ 1,100 ಕಿಮೀ ದೂರ, ಹಾಗು ಶ್ರೀಲಂಕಾದಿಂದ 1,050 ಕಿಮೀ ದೂರದಲ್ಲಿದೆ.

ಈ ಮೂರು ದೇಶಗಳ ಪೈಕಿ ಶ್ರೀಲಂಕಾಗೆ ಇದು ಅತಿ ಸಮೀಪ ಇದೆ. ಇದು ತನಗೆ ಸೇರಿದ್ದು ಎಂಬುದು ಶ್ರೀಲಂಕಾದ ವಾದ. ಸದ್ಯ ಈ ಕೋಬಾಲ್ಟ್ ನಿಕ್ಷೇಪ ಇರುವ ಜಾಗ ಯಾವ ದೇಶಕ್ಕೂ ಸೇರಿಲ್ಲ. ಆದರೆ, ಸಾಗರ ಗಡಿಭಾಗವನ್ನು 200 ನಾಟಿಕಲ್ ಮೈಲುಗಳಷ್ಟು ವಿಸ್ತರಣೆಗೆ ಶ್ರೀಲಂಕಾ ಹಲವು ವರ್ಷಗಳ ಹಿಂದೆಯೇ ಅರ್ಜಿ ಹಾಕಿತ್ತು. ಆದರೆ, 2022ರಲ್ಲಿ ಭಾರತವು ಈ ಅರ್ಜಿ ಬಗ್ಗೆ ತಕರಾರು ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ ಶ್ರೀಲಂಕಾ ಪರವಾಗಿ ತೀರ್ಪು ಬಂದರೆ ಕೋಬಾಲ್ಟ್ ನಿಕ್ಷೇಪದ ಜಾಗ ಶ್ರೀಲಂಕಾ ವ್ಯಾಪ್ತಿಗೆ ಬರುತ್ತದೆ.

ಕೋಬಾಲ್ಟ್ ಒಂದಕ್ಕೆ ಭಾರತ ಜಟಾಪಟಿಯಲ್ಲ…

ಅಫಾನಾಸಿ ನಿಕಿಟಿನ್ ಸೀಮೌಂಟ್ ಜಾಗದ ಮೇಲೆ ಭಾರತಕ್ಕೆ ಆಸಕ್ತಿ ಇರುವುದು ಕೋಬಾಲ್ಟ್ ಖನಿಜದ ವಿಚಾರಕ್ಕೆ ಮಾತ್ರವಲ್ಲ ಎಂಬುದನ್ನು ಗಮನಿಸಬೇಕು. ಈ ಸ್ಥಳವನ್ನು ಭಾರತ ಕೈಬಿಟ್ಟರೆ ಚೀನಾ ಈ ಪ್ರದೇಶದಲ್ಲಿ ತನ್ನ ಉಪಸ್ಥಿತಿ ಹೆಚ್ಚಿಸಿಕೊಳ್ಳುವ ಅಪಾಯ ಇದೆ. ಇದು ಭಾರತಕ್ಕೆ ತಲೆನೋವಾಗಿರುವ ಸಂಗತಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries