ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಸಭೆ ಕಾಸರಗೋಡಿನ ಕಚೇರಿಯಲ್ಲಿ ಜರುಗಿತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಹಿರಿಯ ಸಾಹಿತಿ ನಾಡೋಜ ಕಮಲಾ ಹಂಪನಾ, ಕಾಸರಗೋಡು ಸೇರಿದಂತೆ,ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಯ ನೂರಾರು ವಿದ್ಯಾಲಯಗಳಿಗೆ ತಲಾ ಐವತ್ತು ಸಾವಿರಕ್ಕೂ ಮಿಕ್ಕ ಮೌಲ್ಯದ ಪುಸ್ತಕಗಳನ್ನು ದಾನಮಾಡಿರುವ ಉಡುಪಿಯ ಬಿ.ಆರ್ ನರಸಿಂಹ ರಾವ್, ಹಿರಿಯ ಹಾಸ್ಯ ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ಇವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು.
ವಿವಿಧ ದತ್ತಿನಿಧಿ ಕಾರ್ಯಕ್ರಮಗಳು ಸೇರಿದಂತೆ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸಭೆಯು ಚರ್ಚೆ ನಡೆಸಿತು. ಕಟ್ಟಡವನ್ನು ಪರಭಾರೆ ಮಾಡಿರುವ ಹಿನ್ನೆಲೆಯಲ್ಲಿ ಮಾಲೀಕರ ವಿನಂತಿಯಂತೆ ಪರಿಷತ್ ಕಛೇರಿಯನ್ನು ಸ್ಥಳಾಂತರಿಸಲು ನಿರ್ಣಯಿಸಲಾಯಿತು. ಕಾಸರಗೋಡಿನ ಎಲ್ಲಾ ಕನ್ನಡಿಗರು ಪರಿಷತ್ತಿನ ಸದಸ್ಯತನ ಸ್ವೀಕರಿಸಿ ಸಾಹಿತ್ಯಪರಿಷತ್ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ವಿನಂತಿಸಲಾಯಿತು. ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಭಟ್ ಧರ್ಮತ್ತಡ್ಕ, ಆಯಿಶಾ ಎ.ಎ ಪೆರ್ಲ, ಗಣೇಶ ಪ್ರಸಾದ ಪಾಣೂರು, ಪುನೀತ ಕೃಷ್ಣ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ವಂದಿಸಿದರು.